ದಿ. ಜಯಕುಮಾರ್ ಪುಣ್ಯತಿಥಿ: ಶಾಲೆಗೆ ೧೦೧ ತಟ್ಟೆ ದೇಣಿಗೆ

ಮಾನ್ವಿ,ಜೂ.೩೦-
ದಿ. ಜಯಕುಮಾರ್ ಸಿಡಿರವರ ಪುಣ್ಯತಿಥಿ ಅಂಗವಾಗಿ ಸಹಶಿಕ್ಷಕ ವಿಜಯಕುಮಾರ ಸಿಡಿ ಅವರು ಅಣ್ಣನ ನೆನಪಿಗಾಗಿ ಪಟ್ಟಣದ ಬಾಲ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ೧೦೧ ತಟ್ಟೆಗಳನ್ನು ದೇಣಿಗೆಯಾಗಿ ನೀಡಿದರು.
ನಂತರ ಮಾತನಾಡಿದ, ಶಿಕ್ಷಕ ವಿಜಯಕುಮಾರ ಸಿಡಿ ಅವರು, ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಅಣ್ಣನಾದ ದಿ. ಜಯಕುಮಾರ ಸಿಡಿ ಅವರ ನೆನಪಿಗಾಗಿ ಕಳೆದ ಬಾರಿ ಇದೆ ಶಾಲೆಯಲ್ಲಿ ೧೩೦ ಗ್ಲಾಸಗಳನ್ನು ನೀಡಲಾಗಿತ್ತು. ಈ ಬಾರಿಯೂ ಕೂಡ ೧೦೧ ತಟ್ಟೆಗಳನ್ನು ನೀಡಿಲಾಗಿದೆ. ಇದನ್ನು ಮಕ್ಕಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕಿ ಮಹಾದೇವಿ, ಸಹಶಿಕ್ಷಕರಾದ ರೇಣುಕಾ, ಶಿವರಾಜ ನಕ್ಕುಂದಿ, ರಾಧಾಬಾಯಿ ಅಕ್ಬರ್ ಅಲಿ, ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು , ಅಡುಗೆ ಸಿಬ್ಬಂದಿಗಳು ಇದ್ದರು.