ದಿ. ಇಂದಿರಾಗಾಂಧಿ ಜನ್ಮ ದಿನಾಚರಣೆ

ಲಕ್ಷ್ಮೇಶ್ವರ, ನ 20- ದೇಶ ಕಂಡ ಅಪ್ರತಿಮ ಧೀರ ಮಹಿಳೆ, ದೇಶದ ಮೊದಲ ಮಹಿಳಾ ಪ್ರಧಾನ ಮಂತ್ರಿ ದಿವಂಗತ ಶ್ರೀಮತಿ ಇಂದಿರಾ ಗಾಂಧಿ ಅವರು ಉಕ್ಕಿನ ಮಹಿಳೆ ಆಗಿದ್ದರು ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಅವರು ಇಂದಿರಾ ಗಾಂಧಿ ಅವರ 103ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ ದೇಶದಲ್ಲಿ ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಮತ್ತು ಹಿಂದುಳಿದ ವರ್ಗದವರಿಗೆ ಧ್ವನಿ ನೀಡಿದ ಶ್ರೇಯಸ್ಸು ಸಲ್ಲುತ್ತದೆ.
ಬ್ಯಾಂಕ್ ಗಳ ರಾಷ್ಟ್ರೀಕರಣ, ಉಳುವವನೇ ಒಡೆಯ, 20 ಅಂಶಗಳ ಕಾರ್ಯಕ್ರಮ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಗತ್ತು ಭಾರತವನ್ನು ನೋಡುವಂತೆ ಮಾಡಿದ ಕಿರ್ತಿ ಅವರಿಗೆ ಸಲ್ಲುತ್ತದೆ ಎಂದರು
ಕಾರ್ಯಕ್ರಮದಲ್ಲಿ ಸೋಮಣ್ಣ ಮುಳಗುಂದ, ಪುರಸಭೆ ಉಪಾಧ್ಯಕ್ಷ ರಾಮಣ್ಣ ಗಡದವರ, ಸಾಹಿಬ್ ಜಾನ್ ಹವಾಲ್ದಾರ್, ಮುತ್ತಣ್ಣ ಬಟ್ಟೂರ,ನೀಲಪ್ಪ ಪಡಿಗೇರಿ, ಈರಣ್ಣ ಅಂಕಲಕೋಟಿ, ಸಿದ್ದಲಿಂಗೇಶ್ವರ ರಗಟಿ, ವಿರೇಂದ್ರ ಭಜಂತ್ರಿ, ಸೋಮಣ್ಣ ಯತ್ನಳ್ಳಿ, ಶೇಕಪ್ಪ ಹಂಜಗಿ, ಕಿರಣ್ ನವಲೆ, ಲೆಂಕಪ್ಪ ಶೆರಸೂರಿ ಸೇರಿ ಅನೇಕರು ಇದ್ದರು ಹಾಗೂ ಅಮರೇಶ ತೆಂಬದಮನಿ ಕಾರ್ಯಕ್ರಮ ನಿರ್ವಹಿಸಿದರು.