ದಿ.ಅಶೋಕ ಗಸ್ತಿ ಅವರ ಮಾರ್ಗದರ್ಶನ ನಮಗೆ ಮಾದರಿ

ಗಂಗಾವತಿ ನ.18: ನಗರದ ಸಂತೆ ಬಯಲುನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಗಂಗಾವತಿಯ ಸವಿತಾ ಸಮಾಜದ ವತಿಯಿಂದ ಮಾಜಿ ರಾಜ್ಯಸಭಾ ಸದಸ್ಯ ದಿ.ಅಶೋಕ ಗಸ್ತಿ ಅವರ 56ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸವಿತಾ ಸಮಾಜದ ಕೊಪ್ಪಳ ಜಿಲ್ಲಾ ಪ್ರತಿನಿಧಿ ಈ.ಮಾರೇಶ ಮಾತನಾಡಿ, ನಮ್ಮ ಸಮಾಜದ ಮುಖಂಡ, ದಿ.ಅಶೋಕ ಗಸ್ತಿಯವರು ಇತ್ತೀಚೆಗೆ ರಾಜ್ಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರು ಸಮಾಜದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಸಿದ್ದಾರೆ. ಅಂತವರ ಮಾರ್ಗದರ್ಶನ ನಮಗೆ ಮಾದರಿಯಾಗಿದೆ. ಅಲ್ಲದೆ ಅವರಿಂದ ತೆರವಾದ ರಾಜ್ಯಸಭಾ ಸದಸ್ಯರ ಸ್ಥಾನವನ್ನು ಸುಮಾ ಗಸ್ತಿ ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಗಂಗಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಈ.ತಾಯಪ್ಪ, ಗಂಗಾವತಿ ನಗರ ಘಟಕ ಅಧ್ಯಕ್ಷ ಹೆಚ್.ಗೋಪಾಲ, ತಾಲೂಕು ಉಪಾಧ್ಯಕ್ಷ ಎನ್.ವೈ ಮಹಾಬಳೇಶ್ವರ, ಯುವ ಘಟಕ ಉಪಾಧ್ಯಕ್ಷ ಹೆಚ್.ಮಾರೇಶ, ಆನೆಗೊಂದಿ ಘಟಕದ ಅಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಗಾಳೇಶ, ಎನ್.ಆರ್.ವಿಶ್ವನಾಥ, ಎನ್.ಭೀಮೇಶ, ಹೆಚ್.ಹರಿ, ಖಜಾಂಚಿ ಎಂ.ಅಶೋಕ ಉಪಸ್ಥಿತರಿದ್ದರು.