ದಿವ್ಯ ಶಕ್ತಿಯ ಭವ್ಯ ಪರಂಪರೆ

ಔರಾದ :ಜ.20: ತಾಲೂಕಿನ ಖಂಡಕೇರಿ ಗ್ರಾಮದಲ್ಲಿ
ದಿವ್ಯಶಕ್ತಿಯ ಭವ್ಯ ಪರಂಪರೆ ಹಾಗೂ ಪೂಜ್ಯ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ 37 ನೇ ಸ್ಮರಣೋತ್ಸವ ನಿಮಿತ್ತ ನಡೆದ ಸಂಗೀತ ದರ್ಬಾರ ಕಾರ್ಯಕ್ರಮಕ್ಕೆ ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಅವರು ಉದ್ಘಾಟಿಸಿದರು.

ಖಂಡೆಕೇರಿ ಗ್ರಾಮದ ಪೂಜ್ಯ ಯಲ್ಲಾಲಿಂಗ ಮಹಾಪ್ರಭುಗಳ ಗದ್ದುಗೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಮಾತನಾಡಿದ ಅವರು ಇಡೀ ವಿಶ್ವಕ್ಕೆ ಸಂಸ್ಕøತಿ, ದಿವ್ಯ ಪರಂಪರೆಯ ಮೂಲಕ ಗುರುವಾಗುವ ಶಕ್ತಿ ಹೊಂದಿರುವ ದೇಶ ನಮ್ಮದು. ನಮ್ಮತನವನ್ನು ಹೊಂದಿರುವ ನಮ್ಮ ದೇಶದ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯವನ್ನು ಕಾಪಾಡಿಕೊಂಡು ಹೋಗುವ ಕೆಲಸ ಶ್ರೀ ಶಿವಾನಂದ ಅಪ್ಪಾಜಿ ಅವರು ಮಾಡುತ್ತಿದ್ದಾರೆ, ಎಲ್ಲರೂ ಕೈ ಜೋಡಿಸಿ ಭವ್ಯ ಭಾರತ ನಿರ್ಮಾಣ ಮಾಡುವ ಕಾರ್ಯ ಮಾಡೋಣ ಎಂದು ತಿಳಿಸಿದರು.

ತಾಲೂಕಿನ ಧೂಪತಮಹಾಗಾಂವ, ಜಿರ್ಗಾ, ಸಂಗೀತ ಕಲಾವಿದರಿಂದ ಸಂಗೀತ ದರ್ಬಾರ್ ಕಾರ್ಯಕ್ರಮ ಜರುಗಿತು. ನಂತರ ಮಹಾ ಪ್ರಸಾದ ಜರುಗಿತು. ಈ ಸಂದರ್ಭದಲ್ಲಿ ಏಕತಾ ಫೌಂಡೇಶನ್ ಹೊರ ತಂದಿರುವ 2023ನೇ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಸದ್ಭಕ್ತಾದಿಗಳು, ಯುವಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.