ದಿವ್ಯಾ ಹಾಗರಗಿಗೆ ಅದ್ಧೂರಿ ಸ್ವಾಗತ

ಕಲಬುರಗಿ,ಜ 7: ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದಿವ್ಯಾ ಹಾಗರಗಿಗೆ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಮತ್ತು ಅಭಿಮಾನಿ ಬಳಗದವರು ಅದ್ಧೂರಿ ಸ್ವಾಗತ ಕೋರಿದರು.
ದಿವ್ಯಾ ಹಾಗರಗಿಗೆ ಹಾರ ತೂರಾಯಿ ಹಾಕಿ ಸ್ವಾಗತ ಕೋರಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಜೈಲಿನಿಂದ ಬಿಡುಗಡೆಯಾದ ಬಳಿಕ ಜೈಲಿನ ಬಿಜೆಪಿಯ ಉಚ್ಚಾಟಿತ ಕೆಲವು ನಾಯಕರು ಸ್ವಾಗತ ಕೋರಿದರು.
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಗಿ ಸೇರಿ 27 ರನ್ನು ಜ. 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು