ದಿವ್ಯಾ ಖೋಸ್ಲಾ- ಟಿ ಸೀರಿಸ್ ಮಾಲಕ ಭೂಷಣ್ ಕುಮಾರ್ ಪ್ರತ್ಯೇಕಗೊಂಡರೇ….? ಗಂಡನ ಸರ್ನೇಮ್ ಕಿತ್ತು ಹಾಕಿದರೇಕೆ ದಿವ್ಯಾ?

ನಟಿ ದಿವ್ಯಾ ಖೋಸ್ಲಾ ತನಗಿಂತ ೧೦ ವರ್ಷ ಹಿರಿಯರಾಗಿದ್ದ ಭೂಷಣ್ ಕುಮಾರ್ ರನ್ನು ವಿವಾಹವಾಗಿದ್ದಾರೆ. ಆದರೆ ಇಬ್ಬರ ನಡುವೆ ಮನಸ್ತಾಪವಿದೆ ಎಂದು ಇತ್ತೀಚೆಗೆ ವರದಿಯಾಗಿ ಅಭಿಮಾನಿಗಳಲ್ಲಿ ಗೊಂದಲ ಹುಟ್ಡಿದೆ.
ಈ ದಂಪತಿ ಬೇರ್ಪಟ್ಟ ಸುದ್ದಿ ಬಾಲಿವುಡ್ ವಲಯದಿಂದ ನಿರಂತರವಾಗಿ ಹೊರಬರುತ್ತಿದೆ. ಇತ್ತೀಚೆಗೆ ಇಶಾ ಡಿಯೋಲ್ ಪತಿ ಭರತ್ ತಖ್ತಾನಿಯೊಂದಿಗೆ ತನ್ನ ೧೨ ವರ್ಷದ ದಾಂಪತ್ಯವನ್ನು ಕೊನೆಗೊಳಿಸಿದರು .ಅದೇ ಸಮಯದಲ್ಲಿ, ಈಗ ನಟಿ ದಿವ್ಯಾ ಖೋಸ್ಲಾ ಮತ್ತು ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಸುತ್ತುತ್ತಿವೆ. ನಟಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಿಂದ ತನ್ನ ಗಂಡನ ಉಪನಾಮವನ್ನು ಸಹ ತೆಗೆದುಹಾಕಿದ್ದಾರೆ, ಹೀಗಾಗಿ ಈ ದಂಪತಿ ಕೂಡ ಬೇರೆಯಾಗಲಿದ್ದಾರೆಯೇ ಎಂಬ ಸುದ್ದಿ ತೀವ್ರವಾಗಿದೆ.


ದಿವ್ಯಾ ತನ್ನ ಗಂಡನ ಉಪನಾಮವನ್ನು ತೆಗೆದುಹಾಕಿದರು:
ಪೋಸ್ಟ್‌ನಲ್ಲಿ, ದಿವ್ಯಾ ಮತ್ತು ಭೂಷಣ್ ಕುಮಾರ್ ನಡುವಿನ ಸಂಬಂಧದಲ್ಲಿ ಬಿರುಕು ಇದೆಯೇ….? ಎಂದು ಅಭಿಮಾನಿಗಳು ಬರೆದಿದ್ದಾರೆ. ಇಷ್ಟೇ ಅಲ್ಲ, ಆ ಪೋಸ್ಟ್ ಪ್ರಕಾರ, ದಿವ್ಯಾ ತನ್ನ ಪತಿಯೊಂದಿಗೆ ಬಹಳ ದಿನಗಳಿಂದ ಕಾಣಿಸಿಕೊಂಡಿಲ್ಲ, ದಿವ್ಯಾ ಖೋಸ್ಲಾ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ತನ್ನ ಗಂಡನ ಉಪನಾಮವನ್ನು ಸಹ ತೆಗೆದುಹಾಕಿದ್ದಾರೆ. ಇದಲ್ಲದೆ, ಅವರು ಭೂಷಣ್ ಕುಮಾರ್ ಅವರ ಕಂಪನಿ ಟಿ-ಸಿರೀಸ್ ನ್ನು ಸಹ ಅನ್ ಫಾಲೋ ಮಾಡಿದ್ದಾರೆ.
ದಂಪತಿಯ ನಡುವೆ ೧೦ ವರ್ಷಗಳ ಅಂತರ:
೩೬ ನೇ ವಯಸ್ಸಿನ ದಿವ್ಯಾ ಖೋಸ್ಲಾ ಆಗಾಗ್ಗೆ ತನ್ನ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಆದರೆ, ಅವರ ಪತಿ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ಅವರಿಗೆ ೪೬ ವರ್ಷ. ಇಬ್ಬರ ನಡುವೆ ೧೦ ವರ್ಷಗಳ ದೊಡ್ಡ ವಯಸ್ಸಿನ ಅಂತರವಿದೆ, ಆದರೆ ಇದರ ಹೊರತಾಗಿಯೂ, ಇಬ್ಬರೂ ತುಂಬಾ ಇಷ್ಟಪಟ್ಟಿದ್ದರು. ಭೂಷಣ್ ಮತ್ತು ದಿವ್ಯಾ ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ ಮತ್ತು ಅವರಿಬ್ಬರಿಗೂ ಒಬ್ಬ ಮಗನಿದ್ದಾನೆ.
ಇವರ ಸಂಬಂಧದಲ್ಲಿ ನಿಜವಾಗಿಯೂ ಬಿರುಕು ಉಂಟಾಗಿದೆಯೇ?:
ಆದರೆ ಈಗ ಅವರ ದಾಂಪತ್ಯದಲ್ಲಿ ಕೊಂಚ ಹುಳುಕಿದೆ. ದಿವ್ಯಾ ಮತ್ತು ಭೂಷಣ್ ನಡುವೆ ಎಲ್ಲವೂ ಸರಿ ಹೋಗುತ್ತಿಲ್ಲ ಎಂಬ ವರದಿಗಳಿವೆ. ಆದರೂ, ದಿವ್ಯಾ ಖೋಸ್ಲಾ ಮತ್ತು ಭೂಷಣ್ ಕುಮಾರ್ ಅವರಿಂದ ವಿಚ್ಛೇದನದ ವದಂತಿಗಳ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ ಅಥವಾ ಅವರಿಬ್ಬರೂ ಈ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಆದರೆ, ದಿವ್ಯಾ ಮತ್ತು ಭೂಷಣ್ ಬಹಳ ದಿನಗಳಿಂದ ಪರಸ್ಪರ ಅಂತರ ಕಾಯ್ದುಕೊಂಡಿದ್ದಾರೆ ಯಾಕೆ…?ಎನ್ನಲಾಗುತ್ತಿದೆ.


ವಿಚ್ಛೇದನದ ಸುದ್ದಿ ಸುಳ್ಳು!:
ಯಾವ ಕಾರಣಕ್ಕಾಗಿ ದಿವ್ಯಾ ಖೋಸ್ಲಾ ತನ್ನ ಪತಿಯ ಉಪನಾಮವನ್ನು ತೆಗೆದುಹಾಕಿದ್ದಾರೆ? ನಟಿ ದಿವ್ಯಾ ಖೋಸ್ಲಾ ಅವರು ತಮ್ಮ ಪತಿ ಭೂಷಣ್ ಕುಮಾರ್ ಅವರ ಉಪನಾಮವನ್ನು ತಮ್ಮ ಹೆಸರಿನಿಂದ ತೆಗೆದುಹಾಕಿದ್ದಾರೆ ಯಾಕೆ…?ಈಗ ಇದಕ್ಕೆ ಕಾರಣ ಬೆಳಕಿಗೆ ಬಂದಿದೆ.
ದಂಪತಿ ಬೇರ್ಪಟ್ಟ ಸುದ್ದಿ ಬಾಲಿವುಡ್ ವಲಯದಿಂದ ನಿರಂತರವಾಗಿ ಹೊರಬರುತ್ತಿರುವ ಕಾರಣ ಗೊಂದಲವನ್ನು ಪರಿಹರಿಸಬೇಕಾಗಿದೆ!
ನಟಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಿಂದ ತನ್ನ ಗಂಡನ ಉಪನಾಮವನ್ನು ತೆಗೆದುಹಾಕಿದ ಸುದ್ದಿ ಹೊರಬಿದ್ದ ನಂತರ ದಿವ್ಯಾ ಅಭಿಮಾನಿಗಳಲ್ಲಿ ನಟಿ ಆಕೆಯ ಪತಿ ಮತ್ತು ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್‌ನಿಂದ ಬೇರ್ಪಡುತ್ತಿದ್ದಾರಾ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ದಿವ್ಯಾ ತನ್ನ ಹೆಸರಿನಿಂದ ’ಕುಮಾರ್’ ಎಂಬ ಉಪನಾಮವನ್ನು ಏಕೆ ತೆಗೆದುಹಾಕಿದ್ದಾರೆ ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಆರೋಪಗಳು ಕೇಳಿ ಬರುತ್ತಿದ್ದು, ಕೊನೆಯದಾಗಿ ದಿವ್ಯಾ ಕುಮಾರ್ ಉಪನಾಮವನ್ನು ಏಕೆ ತೆಗೆದಿದ್ದಾರೆ ಎಂಬುದು ಕಾರಣ ಇದೀಗ ಬಹಿರಂಗವಾಗಿದೆ.
ಸಂದರ್ಶನದಲ್ಲಿ, ನಟಿಯ ವಕ್ತಾರರು ದಿವ್ಯಾ ಖೋಸ್ಲಾ ತನ್ನ ಗಂಡನ ಉಪನಾಮವನ್ನು ತನ್ನ ಹೆಸರಿನಿಂದ ಏಕೆ ತೆಗೆದುಹಾಕಿದ್ದಾರೆ ಎಂದು ಉತ್ತರ ಹೇಳಿದ್ದಾರೆ. ಅದು-ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ದಿವ್ಯಾ ಇದೆಲ್ಲ ಮಾಡಿದ್ದಾರೆ ಎನ್ನುತ್ತಾರೆ!
ದಿವ್ಯಾಗೆ ಜ್ಯೋತಿಷ್ಯದ ಮೇಲೆ ನಂಬಿಕೆ ಇದ್ದು, ಆ ಕಾರಣದಿಂದಲೇ ಆಕೆ ತನ್ನ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
೨೦೦೫ ರಲ್ಲಿ ವಿವಾಹವಾದರು:
ದಿವ್ಯಾ ಖೋಸ್ಲಾ ೨೦೦೫ ರಲ್ಲಿ ಟಿ-ಸೀರೀಸ್ ಮಾಲೀಕ ಭೂಷಣ್ ಕುಮಾರ್ ಅವರನ್ನು ವಿವಾಹವಾದರು. ನಟಿ ಆಗಾಗ್ಗೆ ತಮ್ಮ ಕುಟುಂಬದ ಸುಂದರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ದಿವ್ಯಾ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಪರ ಜೀವನವನ್ನು ಪ್ರತ್ಯೇಕವಾಗಿ ಇಡಲು ಇಷ್ಟಪಡುತ್ತಾರೆ. ನಟಿಗೆ ಒಬ್ಬ ಮಗನೂ ಇದ್ದಾನೆ, ಅವನ ಹೆಸರು ರುಹಾನ್.
ದಿವ್ಯಾ ಖೋಸ್ಲಾ ಯಾವೆಲ್ಲ ಚಿತ್ರಗಳಲ್ಲಿ ಕಾಣಿಸಿಕೊಂಡರು:
ದಿವ್ಯಾ ಖೋಸ್ಲಾ ಯಾರಿಯಾಂ ೨, ಸತ್ಯಮೇವ್ ಜಯತೇ, ಸತ್ಯಮೇವ್ ಜಯತೆ-೨, ಅಬ್ ತುಮ್ಹಾರೆ ಹವಾಲೆ ವತನ್ ಸಾಥಿಯೋಂ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಸನಮ್ ರೇ, ಯಾರಿಯಾಂ ಚಿತ್ರಗಳನ್ನೂ ದಿವ್ಯಾ ನಿರ್ದೇಶಿಸಿದ್ದಾರೆ.