ದಿವ್ಯಾ ಕೊಂಡಗೂಳಿ ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಯಡ್ರಾಮಿ:ಜ.31:ತಾಲೂಕಿನ ಕೊಂಡಗೂಳಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯ ದಿವ್ಯಾ ನಿಂಗನಗೌಡ ಬಿರಾದಾರ ವಿದ್ಯಾರ್ಥಿನಿ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲೆಗೂ ಹಾಗೂ ಗ್ರಾಮಕ್ಕೆ ಗೌರವ ತಂದಿದ್ದಾಳೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಯಡ್ರಾಮಿ ತಾಲೂಕಿನ ಕೊನೆಯ ಹಳ್ಳಿಯ ಪ್ರತಿಭೆ ಕರ್ನಾಟಕದ ಪ್ರಸಿದ್ಥ ಹಾಡುಗಳಲ್ಲಿ ಒಂದಾದ ಹಸುವಿನ ಪೂಣ್ಯಕೋಟಿ ಹಾಡಿಗೆ ಜಿಲ್ಲಾ ಪ್ರತಿಭಾ ಕಾರಂಜಿಯಲ್ಲಿ ನೃತ್ಯ ಮಾಡುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು.

ಗ್ರಾಮೀಣ ಪ್ರತಿಭೆಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅವಕಾಶ ದೊರಕಿರುವದು ನಮ್ಮ ಗ್ರಾಮ ಹಾಗೂ ಶಾಲೆಗೆ ಘನತೆ ತಂದುಕೊಟ್ಟ ದಿವ್ಯಾ ಅವರು ರಾಜ್ಯ ಮಟ್ಟದಲ್ಲಿ ಕೂಡ ಜಯಶಾಲಿಯಾಗಿ ಬಂದು ಗ್ರಾಮೀಣ ಹೆಸರು ತರಬೇಕು ಎಂದು ಶಿಕ್ಷಕರು ಹಾಗೂ ಗ್ರಾಮಸ್ಥರು ಹಾರೈಸಿದರು.

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಯನ್ನು ಶಾಲಾ ಮುಖ್ಯಗುರುಗಳಾದ ಚಿದಾನಂದ ದಪ್ಪಿನ್ ಶಿಕ್ಷಕರಾದ ಬಸಪ್ಪ ಹೂಗಾರ,ರಮೇಶ ನಂದಶೆಟ್ಟಿ, ಶರಣಬಸಪ್ಪ ನಾಗೂರ,ರವಿಕುಮಾರ ಶಿತೋಳೆ
ಶ್ರೀಮತಿ ರೇಷ್ಮಾ ಕುಳಗೇರಿ,ಪಾಲಕರಾದನಿಂಗನಗೌಡ ಪಾಟೀಲ್,ಶ್ರೀಮತಿ ನಾಗಮ್ಮ ಪಾಟೀಲ್, ಮಹಿಬೂಬ್ ಖೈನೂರ್,ಹಬೀಬ್ ಮುಲ್ಲಾ ಸಾಹಿತಿ,
ಮ.ಖಾ.ಗಿರಣಿ ನಿವೃತ್ತ ಶಿಕ್ಷಕರು ಹಾಗೂ ಸಮಸ್ತ ಕೊಂಡಗೂಳಿ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.