ದಿವ್ಯಾಂಗ ಯುವಕರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಕರೆ: ಬಸವರಾಜ ಹೆಳವರ

ಕಲಬುರಗಿ:ಜೂ.3: ವಿಶೇಷಚೇತನರ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಬಹಳ ಮಹತ್ವದ್ದಾಗಿದೆ. ಶಿಕ್ಷಣದ ಜೋತೆ ಜೋತೆಗೆ ಯುವಕರು ತಮ್ಮ ಪ್ರತಿಭೆಗೆ ತಕ್ಕಂತೆ ವಿವಿಧ ‌ರೀತಿಯ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಬಹುದು.

ವಿಶೇಷಚೇತನ ಮಕ್ಕಳಲ್ಲಿ ಇರುವ ಅಭೂತಪೂರ್ವ ಪ್ರತಿಭೆಯನ್ನು ಹೊರ ಹಾಕಲು ಅವಕಾಶಗಳ ಅಗತ್ಯವಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವಜನರ ಏಳಿಗೆಗಾಗಿ ಸೂಕ್ತ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಮತ್ತು ವಿಶೇಷಚೇತನರ ಕ್ರೀಡೆಗಳಿಗೆ ಹಿಚ್ಚಿನ ಪ್ರಾಶಸ್ತ್ಯ ನೀಡುವುದರ ಜೋತೆಗೆ ಯುವ ಕ್ರೀಡಾಪಟುಗಳಿಗೆ ಉತ್ತೇಜನ ನೀಡುತ್ತಿದೆ.

ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ, ಬೆಂಗಳೂರು ವತಿಯಿಂದ ವಿಶೇಷಚೇತನರಿಗಾಗಿ ಪ್ರತಿ ವರ್ಷ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳನ್ನು ಏರ್ಪಡಿಸಲಾಗುತ್ತದೆ.

ಡಿಸೆಂಬರ 2021ರಲ್ಲಿ ಏಶಿಯನ್ ಪ್ಯಾರಾ ಕ್ರೀಡೆಗಳು ಬೆಹರೆನನಲ್ಲಿ ನಡೆಯುವ ಸಂಭವವಿದೆ.ಕಲ್ಯಾಣ ಕರ್ನಾಟಕ ಭಾಗದ ದಿವ್ಯಾಂಗ ಯುವ ಕ್ರೀಡಾಪಟುಗಳು ಅಂಗವೈಕಲ್ಯತೆಯ ಕೀಳರಿಮೆ ಮರೆತು ಪ್ಯಾರಾ ಕ್ರೀಡೆಗಳಲ್ಲಿ ಉತ್ಸಾಹದಿಂದ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಉತ್ತಮ ಸಾಧನೆಗೈದು ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರುವಂತ ಸುವರ್ಣಾವಕಾಶಗಳನ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ತಿಳಿಸಿದ್ದಾರೆ.