ದಿವ್ಯಾಂಗ ಚೇತನರಿಗೆ ಫುಡ್ ಕಿಟ್

ಜಗಳೂರು.ಜೂ.೭; ಹೃದಯ ಶ್ರೀಮಂತರು ಅಂದರೆ ನೀವು ವಿಕಲಚೇತನರು ನಿಮಗೆ ಯಾವ ಪದಗಳು ಹೇಳಲು ಸಾಧ್ಯವಿಲ್ಲ ದೈಹಿಕ ಅಂಗವೈಕಲ್ಯವಿದ್ದರು ಆತ್ಮಸ್ಥೈರ್ಯ ದಿಂದ ಮಾಡುತ್ತಿರುವ ನಿಮ್ಮ ಸೇವೆ ಅನನ್ಯ ಎಂದು ಸಮಾಜ ಸೇವಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು .  ಪಟ್ಟಣದ ತಮ್ಮ ನಿವಾಸದಲ್ಲಿ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಅಂಗವಿಕಲರ ಪುನರ್ ವಸತಿ ಸಮಿತಿ ಅವರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.ಕೊರೋನದಿಂದ ಬಳಲುತ್ತಿರುವ ಹಲವಾರು ಕುಟುಂಬಗಳು ಇಂದಿನ ದಿನ ಬೀದಿಪಾಲಾಗಿರುವ ಈ ವೇಳೆ ನನ್ನ ಕೈಲಾದ ಅಳಲು ಸೇವೆಯನ್ನು ಮಾಡಲು ಪ್ರೇರಣೆಯಾಗಿ, 22 ಪಂಚಾಯಿತಿಯ ಮುಖಸ್ತರನ್ನು ಆಯ್ಕೆ ಮಾಡಿಕೊಂಡು ನೀವು ಮಾಡುವ ಸೇವಾಕಾರ‍್ಯದ ಬಗ್ಗೆ ತಿಳಿದುಕೊಂಡಾಗ ತಿಳಿಯಿತು ನಿಜವಾದ ಬಡವ ಯಾರು ಎಂದರೆ ಅಂಗವೈಕಲ್ಯ ಹೊಂದಿರುವ ನೀವು ಎಂದರು. ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಹಾಯದ ಹಸ್ತವನ್ನು ಚಾಚುವ ನಿಟ್ಟಿನಲ್ಲಿ ನಾನು ಮಾಡುವ ಈ ಕಾರ‍್ಯ ಅಂತಹ ದೊಡ್ಡ ಸಾಧನೆಯೂ ಅಲ್ಲ, ಹೊಗಳಿಕೆಯೂ ಅಲ್ಲ ಸರಕಾರ ನಿಮ್ಮನ್ನು ಗುರುತಿಸಿ ನಿಮ್ಮ ಕಷ್ಟ ಸುಖಗಳಿಗೆ ನೆರವಾಗಬೇಕು. ಆದರೆ ಕೆಲ ಘನವಂತರಾಗಲಿ, ಧನವಂತರಾಗಲಿ ನಿಮ್ಮ ಕಡೆ ಗಮನ ಹರಿಸಿ ನಿಮ್ಮಗಳ ಸೇವೆಯನ್ನು ಗುರುತಿಸಿ ಬೆಂಬಲಿಸುವ ಕಾರ‍್ಯವನ್ನು ಮಾಡುವಂತ ಮನಸ್ಸು ನೀಡಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.ಈ ವೇಳೆ ಮುಖಂಡರಾದ ಕೊರಟಿಕೆರೆ ಗುರುಸಿದ್ದನಗೌಡ್ರು ಮಡ್ರಳ್ಳಿ ಗಿರೀಶ್ ಮಲೆ‌ಮಾಚಿಕೆರೆಸತೀಶ್, ಸಮಿತಿ ಮುಖಂಡರಾದ ಅಂಜಿನಪ್ಪ ನಾಗೇಶ್, ರಾಮಚಂದ್ರಪ್ಪ, ದುರುಗಮ್ಮ,ಶಿಲ್ಪ ಸೇರಿದಂತೆ 22 ಪಂಚಾಯಿತಿಯ ಅಂಗವಿಕಲರ ಪುನರ್ ವಸತಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.