ದಿವ್ಯಾಂಗ್ ಕ್ರಿಕೆಟ್ ಪಂದ್ಯಾವಳಿಗೆ ಮಹಾಂತೇಶ ಚಲುವಾದಿ ಆಯ್ಕೆ

ವಿಜಯಪುರ, ಮಾ.31-ದಿವ್ಯಾಂಗ್ ಕ್ರಿಕೆಟ್ ಕಂಟ್ರೋಲ್ ಬೋರ್ಡ್ ಆಫ್ ಇಂಡಿಯಾಗೆ ಪ್ರತಿನಿಧಿಯಾಗಿ ಮಹಾಂತೇಶ ವೀರಬಸಪ್ಪ ಚಲುವಾದಿ ಆಯ್ಕೆಯಾಗಿದ್ದಾರೆ.
ಮಹಾಂತೇಶ ವೀರಬಸಪ್ಪ ಚಲುವಾದಿ ಅವರು ಸಾ. ಅಂಬಳನೂರ ತಾ. ಬಸವನಬಾಗೇವಾಡಿ ಜಿಲ್ಲಾ ವಿಜಯಪುರ ಡಿ.ಸಿಸಿ. ಬ್ಯಾಂಕ್ ನಿಯಮಿತ ಹೂವಿನ ಹಿಪ್ಪರಗಿ ಶಾಖೆಯಲ್ಲಿ ಜವಾನರಾಗಿ ಕಾರ್ಯನಿರ್ವಹಿಸುತ್ತಲಿದ್ದು, ದಿ. 08-04-2021 ರಿಂದ 15-04-2021 ರವರೆಗೆ ದುಬೈಯಲ್ಲಿ ನಡೆಯುತ್ತಿರುವ ದಿವ್ಯಾಂಗ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಈ ಪಂದ್ಯಾವಳಿಯಲ್ಲಿ 6 ತಂಡಗಳಿದ್ದು ಅದರಲ್ಲಿ ಮುಂಬೈ ಐಡಿಯಲ್ಸ್ ತಂಡವನ್ನು ಮಹಾಂತೇಶ ವೀರಬಸಪ್ಪ ಚಲುವಾದಿ ಅವರು ತಂಡದ ಪ್ರತಿನಿಧಿಯಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇವರ ಈ ಸಾಧನೆಗೆ ಡಿಸಿಸಿ ಬ್ಯಾಂಕಿನ ಅಧ್ಯಕ್ಷರು, ಆಡಳಿತ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.