ದಿವ್ಯಾಂಗರ ಬದುಕಿನ ಔನ್ಯತ್ಯಕ್ಕೆ ಶ್ರಮಿಸಿ-ಹಂಚಾಟೆ

ಧಾರವಾಡ ನ.21-: ಸಮಾಜದ ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆಯಲು ಎಲ್ಲ ನೆಲೆ ಮೂಗಳಿಂದ ವಿಪುಲ ಅವಕಾಶಗಳನ್ನು ಒದಗಿಸಿ ದಿವ್ಯಾಂಗರ ಬದುಕಿನ ಔನ್ಯತ್ಯಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಡಳಿತ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಕರೆನೀಡಿದರು.
ಅವರು ನಗರದ ಡಯಟ್‍ದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ನಗರ ಬಿ.ಆರ್.ಸಿ. ಪ್ರೌಢ ಶಿಕ್ಷಣ ವಿಭಾಗದ ವಿಶೇಷ ಸಂಪನ್ಮೂಲ ವ್ಯಕ್ತಿ ಸುಮಿತಾ ಹಿರೇಮಠ ಗೃಹ ಆಧಾರಿತ ಮತ್ತು ಶಾಲಾ ಸಿದ್ಧತಾ ಕೇಂದ್ರದ ವಿಶೇಷ ಅಗತ್ಯತೆಯುಳ್ಳ ಚೇತನ ಚಿಣ್ಣರಿಗಾಗಿ ಬರೆದಿರುವ ‘ದಿವ್ಯಾಂಗ ದೀವಿಗೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಸುಮಿತಾ ಅವರು ತಮ್ಮ ಕೃತಿಯ ಮೂಲಕ ದಿವ್ಯಾಂಗರ ವ್ಯಾಸಂಗಕ್ಕೆ ಬೆಳಕನ್ನು ನೀಡಿದ್ದು, ಇದೊಂದು ಉತ್ಕøಷ್ಟ ಕೈಪಿಡಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಮಾತನಾಡಿ, ಈ ಕೃತಿಯು ಸಮಾಜದಲ್ಲಿ ಬದುಕುತ್ತಿರುವ ದಿವ್ಯಾಂಗ ಮಕ್ಕಳ ಬಾಳ ಪಥಕ್ಕೆ ಬೆಳಕನ್ನು ತುಂಬಲು ಬೆಳಗಿಸಿದ ದೀವಿಗೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ದಿವ್ಯಾಂಗ ಮಕ್ಕಳನ್ನು ಸಶÀಕ್ತೀಕರಣಗೊಳಿಸಲು ಹಲವಾರು ಅತ್ಯುತ್ತಮ ಯೋಜನೆಗಳನ್ನು ರೂಪಿಸಿದ್ದು, ಆ ಮೂಲಕ ದಿವ್ಯಾಂಗರ ಜೀವನ ವಿಧಾನಕ್ಕೆ ವಿಕಾಸದ ಪಥ ಪ್ರಾಪ್ತವಾಗಲಿ ಎಂದರು.
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಡಿ.ಎನ್. ಮೂಲಿಮನಿ ಮಾತನಾಡಿ, ಸಾಮಾನ್ಯ ವಿದ್ಯಾರ್ಥಿಗಳಂತೆ ದಿವ್ಯಾಂಗ ಮಕ್ಕಳೂ ಸಹ ಶಿಕ್ಷಣ ಪಡೆಯಲು ನಮ್ಮ ಸರಕಾರಗಳು ಹತ್ತು-ಹಲವು ಯೋಜನೆಗಳನ್ನು ರೂಪಿಸಿವೆ. ದಿವ್ಯಾಂಗ ಮಕ್ಕಳ ವ್ಯಾಸಂಗಕ್ಕೆ ಶಿಷ್ಯವೇತನ, ಕಲಿಕಾ ಸಾಮಗ್ರಿಗಳನ್ನು ನೀಡಿ ವ್ಯಾಪಕ ಕಲಿಕಾ ಅವಕಾಶಗಳನ್ನು ಒದಗಿಸಲಾಗಿದೆ ಎಂದರು.
ದಿವ್ಯಾಂಗ ದೀವಿಗೆ ಕೃತಿಯ ಲೇಖಕಿ ಸುಮಿತಾ ಹಿರೇಮಠ ಮಾತನಾಡಿ, ದಿವ್ಯಾಂಗ ಮಕ್ಕಳ ಮಾನಸಿಕ ಸ್ಥಿತಿ ಮತ್ತು ಸಾಮಥ್ರ್ಯವನ್ನು ಅತೀ ಹತ್ತಿರದಿಂದ ಗಮನಿಸಿದ ಅನುಭವದ ಹಿನ್ನೆಲೆಯಲ್ಲಿ ಈ ಅಭ್ಯಾಸ ಪುಸ್ತಕವನ್ನು ಬರೆದಿರುವೆ. ಈ ಕೃತಿಯ ಭಾಗ-1ರಲ್ಲಿ ದಾಖಲೆ-ವಿವಿಧ ಮಾಹಿತಿಗಳಿದ್ದು, ಭಾಗ-2ರಲ್ಲಿ ಸಂಪೂರ್ಣ ದಿವ್ಯಾಂಗ ಮಕ್ಕಳ ಕ;ಲಿಕಾ ಚಟುವಟಿಕೆಗಳಿಗೆ ಸ್ಥಾನ ಕಲ್ಪಿಸಲಾಗಿದೆ ಎಂದರು.
ನಗರ ವಲಯದ ಬಿಇಓ ಎ.ಎ. ಖಾಜಿ ಅಧ್ಯಕ್ಷತೆವಹಿಸಿದ್ದರು. ಬಾಲವಿಕಾಸ ಅಕಾಡಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ, ಡಯಟ್ ಪ್ರಬಾರಿ ಪ್ರಾಚಾರ್ಯ ವೈ.ಬಿ. ಬಾದವಾಡಗಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಪ್ರಮೋದ ಮಹಾಲೆ, ಉಮೇಶ ಬಮ್ಮಕ್ಕನವರ, ಅಶೋಕಕುಮಾರ ಸಿಂದಗಿ, ಬಿ.ಎಸ್. ಮಾಯಾಚಾರಿ, ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ ಮುಂತಾದವರು ಉಪಸ್ಥಿತರಿದ್ದರು.