ದಿವ್ಯಾಂಗರ ಕ್ರೀಡೆಗೆ ಅನುದಾನ: ಹೆಳವರ ಹರ್ಷ

ಕಲಬುರಗಿ:ಜು.8: ಕ್ರೀಡಾ ಚಟುವಟಿಕೆಗಳಲ್ಲಿ ವಿಶೇಷಚೇತನರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಅಗತ್ಯವಾದ ಮೂಲಸೌಕರ್ಯ ಮತ್ತು ನುರಿತ ತರಬೇತುದಾರರಿಂದ ಹೆಚ್ಚಿನ ತರಬೇತಿ ನೀಡಲು ಈ ಸಲದ ಬಜೆಟ್‍ನಲ್ಲಿ ಅನುದಾನ ನೀಡಲಾಗಿದೆ. ಪ್ಯಾರಾಲಂಪಿಕ್ ವಿಜೇತರಿಗೆ ಗ್ರುಪ್ ಎ ಹುದ್ದೆ ಮತ್ತು ಏಷಿಯನ್ ಹಾಗೂ ಕಾಮನ್‍ವೆಲ್ತ್ ಕ್ರೀಡಾ ವಿಜೇತರಿಗೆ ಗ್ರುಪ್ ಬಿ ಹುದ್ದೆಗಳಿಗೆ ನೇಮಕ ಮಾಡಲು ಕೂಡ ಕ್ರಮಕೈಗೊಳ್ಳಲಾಗುತ್ತಿದೆ.

ಸರ್ಕಾರ ಈ ಸಲದ ಬಜೆಟ್‍ನಲ್ಲಿ ವಿಶೇಷ ಅನುದಾನ ನೀಡುವ ಮೂಲಕ ದಿವ್ಯಾಂಗರ ಕ್ರಿಡೇಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷಚೇತನ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹದಾಯಕ ಯೋಜನೆಗಳನ್ನು ಜಾರಿಗೆ ತಂದಿದ್ದು ಹರ್ಷದಾಯಕವಾಗಿದೆ. ರಾಜ್ಯದ ಎಲ್ಲಾ ವಿಶೇಷಚೇತನ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಸರ್ಕಾರದಿಂದ ನೇರವು ನೀಡಬೇಕು ಎಂದು ವಿಶೇಷಚೇತನ ಸಹಾಯವಾಣಿ ಪ್ರತಿಷ್ಠಾನದ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.