ದಿವ್ಯಾಂಗರು ನಿವೇಶನ ಖರೀದಿಸಲು ಪ್ರಾರಂಭಿಕ ಠೇವಣಿ ಮೊತ್ತವನ್ನು ನಿವೇಶನ ಮೌಲ್ಯದ ಶೇ 3ರಷ್ಟು ಮಾಡಲು ಆಗ್ರಹ

ಕಲಬುರಗಿ:ಎ.24: ಕಲಬುರಗಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಇತ್ತೀಚೆಗೆ ನಗರದ ಕುಸನೂರ ವಸತಿ ಯೋಜನೆ ನಿವೇಶನಗಳ‌ ಹಂಚಿಕೆ ಮಾಡಲು ಅಧಿಸೂಚನೆ ದಿನಾಂಕ 07.04.2021ಕ್ಕೆ ಹೊರಡಿಸಲಾಗಿದ್ದು.ಸಾಮಾನ್ಯ ಜನರ ಹಾಗೆ ದಿವ್ಯಾಂಗರಿಗೂ ಕೂಡ ನಿವೇಶನವನಕ್ಕಾಗಿ ಸಲ್ಲಿಸುವ ಅರ್ಜಿಯ ಜೋತೆಗೆ ಆರಂಭಿಕ ಠೇವಣಿ ನಿವೇಶನ ಮೌಲ್ಯದ ಶೇ 10 ರಷ್ಟು ಮೊತ್ತವನ್ನು ನಿಗದಿಗೊಳಿಸಲಾಗಿದೆ.

ದಿವ್ಯಾಂಗರು ಆರ್ಥಿಕವಾಗಿ ಬಹಳ ಹಿಂದುಳಿದವಾರಾಗಿದ್ದು, ಸಾಮಾನ್ಯ ಜನರಿಗಿಂತಲೂ ದಿವ್ಯಾಂಗರಿಗೆ ತಮ್ಮದೇ ಆದ ವಿವಿಧ ರೀತಿಯ ವೈಯಕ್ತಿಕ ಸಮಸ್ಯೆಗಳಿರುತ್ತವೆ. ದಿವ್ಯಾಂಗರು ಸಮಾಜದಲ್ಲಿ ಸಾಮನ್ಯರಂತೆ ಜೀವನ ನಡೆಸುವುದು ಕಷ್ಟ ಸಾದ್ಯ. ಆದಕಾರಣ ದಿವ್ಯಾಂಗರಿಗೂ ಕೂಡ ನಿವೇಶನಕ್ಕಾಗಿ ಅರ್ಜಿ ಹಾಕಲು ಪ್ರಾರಂಭಿಕ ಠೇವಣಿ ಹಣವನ್ನು ನಿವೇಶನ ಮೌಲ್ಯದ ಶೇ 3 ರಷ್ಟು ಮಾಡಬೇಕಾಗಿ ಡಿಸೆಬಲ್ಡ ಹೆಲ್ಪಲೈನ್ ಪೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಆಗ್ರಹಿಸಿದ್ದಾರೆ.