ದಿವ್ಯಂಗ ಚೇತನರಿಗೆ ಲಸಿಕೆ

ಜಗಳೂರು.ಜೂ.೬; ರಾಜ್ಯ ಸರ್ಕಾರ ವಿಶೇಷವಾಗಿ ಅಂಗವಿಕಲರಿಗೆ ಲಸಿಕೆ ಹಾಕಿಸಲು ಪ್ರಥಮ ಆದ್ಯತೆ ಕೊಟ್ಟಿರುವ ಹಿನ್ನೆಲೆಯಲ್ಲಿ ಎಲ್ಲಾ ಅಂಗವಿಕಲರಿಗೆ ಕೋವಿಡ್ 19 ವೈರಸ್ ಹೆಚ್ಚಾದ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ಅಂಗವಿಕಲರಿಗೆ ಲಸಿಕೆ ಹಾಕಿಸಲು  ಜಿಲ್ಲಾಧಿಕಾರಿಗಳು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮತ್ತು ತಾಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿದ್ದರುಅದರಂತೆ ಜಗಳೂರು ಪಟ್ಟಣದಲ್ಲಿ ಒಟ್ಟು 140 ಅಂಗವಿಕಲರಿಗೆ ವಿಶೇಷವಾಗಿ ತಹಶೀಲ್ದಾರ್ ಗಿರೀಶ್ ಬಾಬು. ಪೊಲೀಸ್ ಇಲಾಖೆ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ, ಪ.ಪಂ ಮುಖ್ಯಧಿಕಾರಿ ರಾಜು ಡಿ ಬಣಕರ್ ಅವರು ವಿಶೇಷವಾಗಿ ಎರಡು ಆಟೋ ಗಳ ಮೂಲಕ ಅಂಗವಿಕಲರ ಮನೆಗೆ ಹೋಗಿ ಅಂಗವಿಕಲರನ್ನು ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಲಸಿಕೆ ಹಾಕಿಸಿ ಪುನಹ ಮನೆಗೆ ತಲುಪಿಸುವ ಕಾರ್ಯದಲ್ಲಿ ಪ್ರವೃತ್ತರಾಗಿ ಇದ್ದರು ಜಗಳೂರು ಪಟ್ಟಣದ ಎಲ್ಲಾ ಅಂಗವಿಕಲರಿಗೆ ಲಸಿಕೆ ಹಾಕಿಸುವ ಕಾರ್ಯದಲ್ಲಿ ಪೊಲೀಸ್ ಇಲಾಖೆ. ಕಂದಾಯ ಇಲಾಖೆ. ಪಟ್ಟಣ  ಪಂಚಾಯಿತಿ ಅಧಿಕಾರಿಗಳು ಅಂಗವಿಕಲರಿಗೆ ಲಸಿಕೆ ಹಾಕಿಸಿದ್ದಾರೆಈ ಸಂದರ್ಭದಲ್ಲಿ ತಹಸಿಲ್ದಾರ್ ಗಿರೀಶ್ ಬಾಬು. ಪೊಲೀಸ್ ಇಲಾಖೆ ಉಪ ನಿರೀಕ್ಷಕರಾದ ಸಂತೋಷ್ ಬಾಗೋಜಿ  ಪ.ಪಂ ಮುಖ್ಯಧಿಕಾರಿ ರಾಜು ಡಿ ಬಣಕರ್ ಪಟ್ಟಣ ಪಂಚಾಯಿತಿ  ಅಧ್ಯಕ್ಷರಾದ ತಿಪ್ಪೇಸ್ವಾಮಿ.ಆರ್ ಮತ್ತು ಪ ಪಂ ಕಂದಾಯ ನಿರೀಕ್ಷಕ ಸಂತೋಷ್ ಕುಮಾರ್, ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಇತರರಿದ್ದರು