ದಿವಂಗತ ಕಾಕರ್ಲತೋಟ್ ಕನುಗೊಲು ತಿಮ್ಮಪ್ಪನವರ 23ನೇ ವರ್ಧಂತಿ ಜಯಂತಿ ಆಚರಣೆಬಳ್ಳಾರಿ, ಮೇ.22: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಆವರಣದಲ್ಲಿಂದು  ದಿ|| ಕಾಕರ್ಲತೋಟ್ ಕನುಗೊಲು ತಿಮ್ಮಪ್ಪನವರ 23ನೇ ಪುಣ್ಯಸ್ಮರಣೆಯನ್ನು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್, ಗೌರವ ಕಾರ್ಯದರ್ಶಿಗಳಾದ ಯಶವಂತರಾಜ್ ನಾಗಿರೆಡ್ಡಿ, ಕೆ.ಚನ್ನಪ್ಪ, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರಗಳಾದ ಬಿ.ಮಹರುದ್ರಗೌಡರು, ಉಪಾಧ್ಯಕ್ಷರಾದ ಕೆ.ಸಿ.ಸುರೇಶ ಬಾಬು, ಜಂಟಿ ಕಾರ್ಯದರ್ಶಿಯಾದ ಎಸ್. ದೊಡ್ಡನಗೌಡ್, ವಿ.ರಾಮಚಂದ್ರ, ಎಪಿ.ಎಂ.ಸಿ., ಕಮಿಟಿ, ಚೇರ್ಮನ, ಸುರೇಂದ್ರ ಬಪಾನ್, ಉಚಿತ ಆಸ್ಪತ್ರೆ ಚೇರ್ಮನ್, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಉಪಸ್ಥಿತರಿದ್ದು ಗೌರವ ಸಲ್ಲಿಸಿದರು.