ದಿಲೀಪ್ ವಲ್ಸೆ ಮಹಾರಾಷ್ಟ್ರದ ನೂತನ ಗೃಹ ಸಚಿವ

ಮುಂಬೈ, ಏ.5- ,ಮಹಾರಾಷ್ಟ್ರ ರಾಜ್ಯದ ನೂತನ ಗೃಹ ಸಚಿವರಾಗಿ ಎನ್ ಸಿಪಿ ಮುಖಂಡ ದಿಲೀಪ್ ವಲ್ಸೆ ಅವರನ್ನು ನೇಮಕ ಮಾಡಲಾಗಿದೆ.
100 ಕೋಟಿ ಹಫ್ತಾ ವಸೂಲಾತಿ ಆರೋಪಕ್ಕೆ ಗುರಿಯಾಗಿದ್ದ ಅನಿಲ್ ದೇಶ್ ಮುಖ್ ಗೃಹ ಸಚಿವ ಸ್ಥಾನಕ್ಜೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ.
64 ವರ್ಷದ ದಿಲೀಪ್ ವಲ್ಸೆ ಪಾಟೀಲ್, ಮೃದು ಸ್ವಭಾವಿ, ಕಳಂಕ ರಹಿತ ನಾಯಕರಾಗಿದ್ದು, ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಉದ್ಧವ್ ಠಾಕ್ರೆ ನೇತೃತ್ವದ ಎಂವಿಎ ಸರ್ಕಾರದಲ್ಲಿ ವಲ್ಸೆ ಪಾಟೀಲ್, ಪ್ರಸ್ತುತ ಅಬಕಾರಿ ಮತ್ತು ಕಾರ್ಮಿಕ ಎಂಬ ಎರಡು ಪ್ರಮುಖ ಖಾತೆಗಳನ್ನು ನಿರ್ವಹಿಸುತ್ತಿದ್ದರು.

ಎನ್‌ಸಿಪಿಯ ಹಸನ್ ಮುಶ್ರೀಫ್ ಅವರಿಗೆ ಕಾರ್ಮಿಕ ಖಾತೆ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ಗೆ ಹಣಕಾಸು ಹಾಗೂ ಯೋಜನೆಗಳ ಜೊತೆಗೆ ಅಬಕಾರಿ ಖಾತೆಯ ಜವಾಬ್ದಾರಿ ನೀಡಲಾಗಿದೆ.

ಇಂದು ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ, ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶದ ಬೆನ್ನಲ್ಲೇ ಮಹಾರಾಷ್ಟ್ರ ಗೃಹ ಸಚಿವ ಸ್ಥಾನಕ್ಕೆ ಅನಿಲ್ ದೇಶ್‌ಮುಖ್ ರಾಜೀನಾಮೆ ಸಲ್ಲಿಸಿದ್ದರು.