ದಿಲೀಪ್ ರಾಜ್ ಈಗ ಮಹಾನ್ ಕಲಾವಿದ

ಕಿರುತೆರೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ನಟ ದಿಲೀಪ್ ರಾಜ್ ಅಪ್ರತಿಮ ಕಲಾವಿದ. ಅವರ ಪ್ರತಿಭಾ ಸಾಮಥ್ರ್ಯದ ಬಗ್ಗೆ ಅರಿವಿರುವ ನಿರ್ದೇಶಕ ಅಭಯ್ ಚಂದ್ರ “ಮಹಾನ್ ಕಲಾವಿದ”ನ್ನಾಗಿ ಮಾಡಲು ಹೊರಟಿದ್ದಾರೆ.

ಕಲಾವಿದನ ಬದುಕು ಬವಣೆ ತೋರಿಸುವ ಕಥಾಹಂದರ ಹೊಂದಿರುವ ಚಿತ್ರ “ಮಹಾನ್ ಕಲಾವಿದ”.“ಜವ” ಚಿತ್ರ ಮಾಡಿ ಗಮನ ಸೆಳೆದಿದ್ದ ಅಭಯ್ ಎರಡನೇ ಭಾರಿಗೆ ನಿರ್ದೇಶನ ಕೈಗೆತ್ತಿಕೊಂಡಿದ್ದಾರೆ.

ಮಾಹಿತಿ ಹಂಚಿಕೊಂಡ ಅಭಯ್ ಚಂದ್ರ, ವಿಭಿನ್ನ ಕಥಾಹಂದರದ  ಚಿತ್ರಕ್ಕೆ ಕಲಾವಿದ ಅಂತ ಹೆಸರಿಟ್ಟದ್ದೆ. ರವಿಚಂದ್ರನ್  ಸರ್ ಅವರು ಬರೀ “ಕಲಾವಿದ” ಅಂತ ಬೇಡ. ಏನಾದರೂ ಸೇರಿಸು ಅಂದರು. “ಮಹಾನ್ ಕಲಾವಿದ” ಎಂದು ಹೆಸರಿಡಲಾಗಿದೆ.

ಪಾತ್ರ ಬರೆಯಬೇಕಾದರೆ ದಿಲೀಪ್ ರಾಜ್ ಪಾತ್ರಕ್ಕೆ ಸೂಕ್ತ ಎಂದು ಕೊಂಡಿದ್ದೆ. ಅವರೆ ಚಿತ್ರದ ನಾಯಕರಾದರು. ಜಾಹ್ನವಿ ರಾಯಲ ಹಾಗೂ ಪಲ್ಲವಿ ರಾಜು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಗೆಳೆಯ ಭರತ್ ಬಿ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿದಿದೆ ಎಂದರು.

ನಾಯಕ ದಿಲೀಪ್ ರಾಜ್,ಬಹಳ ದಿನಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಅಭಯ್  ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕಲಾವಿದನ ಮಾಡುವ ನಟನೆ ನಿರ್ದೇಶಕರಿಗೆ ಮೆಚ್ಚುಗೆಯಾಗಬೇಕು. ನನ್ನ ನಟನೆ ಬಗ್ಗೆ ಮೊದಲು ನಿರ್ದೇಶಕರು ಹೇಳಬೇಕು. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವುದಾಗಿ ಹೇಳಿಕೊಂಡರು.

ನಟಿ ಜಾಹ್ನವಿ ರಾಯಲ ಚಿತ್ರದಲ್ಲಿ ದಿಲೀಪ್ ರಾಜ್ ಪತ್ನಿ ಪಾತ್ರ ಮಾಡುತ್ತಿರುವುದಾಗಿ ಜಾಹ್ನವಿ ರಾಯಲ ಎಂದರೆ ಮತ್ತೊಬ್ಬ ನಟಿ ಪಲ್ಲವಿ ರಾಜು ಪಾತ್ರ ಕೂಡ ಚೆನ್ನಾಗಿದೆ ಎಂದರು. ನಿರ್ಮಾಪಕ ಭರತ್ ಬಿ ಗೌಡ, ಅಪ್ಪ-ಅಮ್ಮನ ಸಹಕಾರದಿಂದ ನಿರ್ಮಾಪಕನಾಗಿದ್ದೇನೆ ಮೊದಲ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದರು.