ದಿನ ನಿತ್ಯ ಮಾರುಕಟ್ಟೆ ಸ್ಥಳಾಂತರ

ಸಿರುಗುಪ್ಪ, ಏ.27: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ದಿನದ ಮಾರುಕಟ್ಟೆ ಕುರಿತು ಪತ್ರಿಕಾ ಗೋಷ್ಠಿ ನಡೆಸಿದರು.
ನಗರದ ಮಹಾತ್ಮ ಗಾಂಧಿಜೀ ವೃತ್ತದಲ್ಲಿರುವ ದಿನ ನಿತ್ಯ ತರಕಾರಿ ಮಾರುಕಟ್ಟೆಯು ನಿತ್ಯ ಸಾವಿರಾರು ಜನರು ತರಕಾರಿ ಖರೀದಿಸಲು ಬರುತ್ತಿದ್ದು, ಚಿಕ್ಕ ಸ್ಥಳದಲ್ಲಿ ದಟ್ಟಣೆಯ ಜನರ ಸಾಮೂಹವಾಗುತ್ತದೆ ಇಂತಹಲ್ಲಿ ಸಂದರ್ಭದಲ್ಲಿ ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಜನರನ್ನು ಇಬ್ಬಾಗಿಸಿ ಕರೋನಾ ತಡೆಯಲು ದಿನದ ಮಾರುಕಟ್ಟೆಯನ್ನು ಎರಡು ವಿಭಾಗವಾಗಿ ವಿಸ್ತಾರಿಸಲಾಗಿದೆ, ದಿನ ನಿತ್ಯ ತರಕಾರಿಯನ್ನು ತಾಲೂಕು ಕ್ರಿಡಾಂಗಣದಲ್ಲಿ ಒಬ್ಬರಿಂದ ಒಬ್ಬರಿಗೆ 10ಅಡಿ ಅಂತರದಲ್ಲಿ ಮೂರು ಸಾಲುಗಳಲ್ಲಿ ವ್ಯಾಪಾರವನ್ನು ಮಾಡುವಂತೆ ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ, ಸವಾಲ್ ಹಾಕುವ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಇದ್ದಕ್ಕೆ ವ್ಯಾಪಾರಿಗಳು ಸ್ಪಂದಿಸಬೇಕು, ಕೋವಿಡ್ ಎರಡನೇ ಅಲೆಯು ವೇಗವಾಗಿ ಹರಡುವುದನ್ನು ನಿಯಂತ್ರಿಸಲು ದಟ್ಟನೆಯ ಜನ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಯೊಬ್ಬರು ಅವಶ್ಯಕವಾಗಿರುವ ಕೆಲಸ ಕಾರ್ಯಗಳಿಗೆ ಮಾತ್ರ ಮನೆಯಿಂದ ಹೊರ ಬನ್ನಿ ಅನವಶ್ಯಕವಾಗಿ ಓಡಾಡುವುದನ್ನು ನಿಲ್ಲಿಸಿ, ಮನೆಯಿಂದ ಬರುವಾಗ ಮುಖಕ್ಕೆ ಕಡ್ಡಾಯವಾಗಿ ಮಾಸ್ಕನ್ನು ಧರಿಸಿ, ಸಮಾಜಿಕ ಅಂತರವನ್ನು ಪಾಲಿಸಬೇಕು, ಇಂದರಿಂದ ಕರೋನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಇದೆ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಹಾಗಲೂರು ಮಲ್ಲನಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಸಿ.ಪೊಂಪನಗೌಡ, ಆಹಾರ ಇಲಾಖೆಯ ಅಧಿಕಾರಿ ಮಹೇಶ, ಎ.ಪಿ.ಎಂ.ಸಿ ಆಡಳಿತ ಸಹಾಯಕ ಕಾರ್ಯರ್ನಿಹಕ ಜೋಷಿ, ಮುಂಂಡರಾದ ವೀರೇಶ, ಶಂಕ್ರಪ್ಪ ಇದ್ದರು.