ದಿನಿಶಿ ತಾಂಡ: ನರೇಗಾ ಕೂಲಿಕಾರರಿಗೆ ಅರೋಗ್ಯ ತಪಾಸಣಾ ಶಿಬಿರ

ಕಲಬುರಗಿ,ಮೇ:29. ಜಿಲ್ಲೆಯ ಕಮಲಾಪುರ ತಾಲೂಕಿನ ಕಲಮೂಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ದಿನಿಶಿ ತಾಂಡದಲ್ಲಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ಕೈಗೊಳ್ಳಲಾಯಿತು.
ಕಾಮಗಾರಿ ನಡೆಯುತ್ತೀರುವ ಈ ಸ್ಥಳದಲ್ಲಿ ಕೆಲಸ ನಿರತ ಕೂಲಿ ಕಾರ್ಮಿಕರಲ್ಲಿ ಮಹಿಳೆಯರು ಸಂಖ್ಯೆ 70 ಪುರುಷರ ಸಂಖ್ಯೆ.50 ಒಟ್ಟು 120 ಜನ ಕೂಲಿ ಕಾರ್ಮಿಕರ ಆರೋಗ್ಯ ತಪಾಣೆ ನಡೆಸಲಾಯಿತು.
ಸ್ಥಳದಲ್ಲಿ ಆರೋಗ್ಯ ಅಮೃತ ಅಭಿಯಾನದಡಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕೂಲಿ ಕಾರ್ಮಿಕರಿಗೆ, ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಗ್ರಾಮ ಆರೋಗ್ಯ ಶಿಬಿರಗಳನ್ನು ಅಯೋಜಿಸುವ ಮೂಲಕ ಇಲ್ಲಿ ರಕ್ತದ ಒತ್ತಡ, ಶುಗರ್, ರಕ್ತ ಪರೀಕ್ಷೆ, ಕಣ್ಣಿನ ಪರೀಕ್ಷೆ ಹಲ್ಲು ಪರೀಕ್ಷೆ ಇನ್ನು ಮುಂತಾದ ಪರೀಕ್ಷೆಗಳನ್ನು ಏಕ ಕಾಲಕ್ಕೆ ಮಾಡಲಾಯಿತು.
ಈ ಶಿಬಿರÀದಲ್ಲಿ ಗ್ರಾಮ ಪಂಚಾಯತಿಯ ಡಿಓ ರಾಜು.ಸಿಬ್ಬಂದಿ ವರ್ಗದವರು ಎಲ್ಲಾ ಅಧಿಕಾರಿಗಳು,& ಕೆಎಚ್‍ಪಿಟಿ ತಾಲೂಕ ಸಂಯೋಜಕರಾದ ಉಮೇಶ್ ಜಾಧವ. ಮತ್ತು ಕಮ್ಯುನಿಟಿ ಹೆಲ್ತ್ ಆಫೀಸರ ಬಸವರಾಜ ಹೊಸಮನಿ ಮತ್ತು ಕಾಯಕ ಮಿತ್ರ ನೀಲಮ್ಮ ಕಾರ್ಮಿಕ ವರ್ಗದವರು ಹಾಜರಿದ್ದರು.