ದಿನಸಿ ಖರೀದಿಗೆ ಜನಸ್ತೋಮ – ಕೂಡ್ಲಿಗಿ ಮುಖ್ಯರಸ್ತೆಗಳಲ್ಲಿ ಟ್ರಾಫಿಕ್ ಜಾಮ್.

ಕೂಡ್ಲಿಗಿ.ಜೂ.7:- ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಜಾರಿಗೆ ತಂದ ಲಾಕ್ ಡೌನ್ ಸೂತ್ರದಿಂದ ವಾರಕ್ಕೆರೆಡು ದಿನ ದಿನಸಿ ಖರೀದಿಗೆ ಜಿಲ್ಲೆಯಲ್ಲಿ ಮಧ್ಯಾಹ್ನ 12ಗಂಟೆವರೆಗೆ ಮಾತ್ರ ಅವಕಾಶ ಇದ್ದುದರಿಂದ ದಿನಸಿ ಖರೀದಿಗೆ ಕೂಡ್ಲಿಗಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳ ಭರಾಟೆಯಲ್ಲಿ ಕೆಲಕಡೆ ಟ್ರಾಫಿಕ್ ಜಾಮ್ ಸಹ ಆಗಿರುವುದು ಕಂಡುಬಂದಿತು. ವಾರದಲ್ಲಿ ಎರಡು ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ ಮಾಡುವ ಮೂಲಕ ದಿನೇ ದಿನೇ ಕೊರೋನಾ ಸೋಂಕಿತರ ಪಾಸಿಟಿವಿಟಿ ಪ್ರಕರಣ ಇಳಿಮುಖವಾಗಿದ್ದು ಅದೇ ಸೂತ್ರವನ್ನು ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ಅವಳಿ ಜಿಲ್ಲೆಗಳಿಗೆ ಹೊರಡಿಸಿದ ಆದೇಶವನ್ನು ಮುಂದುವರೆಸಿದ್ದು ಇಂದು ಮತ್ತು ನಾಳೆ ಮಾತ್ರ ದಿನಸಿ ಹಾಗೂ ಇತರೆ ವಸ್ತುಗಳ ಖರೀದಿಗೆ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮದ ಜನತೆ ಖರೀದಿಗಾಗಿ ಜನಸ್ತೋಮ ಸೇರಿದ್ದು ಅತಿಹೆಚ್ಚು ದ್ವಿಚಕ್ರ ವಾಹನಗಳ ಓಡಾಟದಲ್ಲಿ ಅದರ ಮದ್ಯದಲ್ಲಿ ದೊಡ್ಡವಾಹನಗಳು ಅಡ್ಡ ಬಂದಾಗ ಟ್ರಾಫಿಕ್ ಜಾಮ್ ಆಗಿ ಕೆಲಸಮಯ ಅದರಿಂದ ಹೊರಬರಲು ಬಹಳಷ್ಟು ತ್ರಾಸ್ ಪಟ್ಟರು.
12ಗಂಟೆಯಾಗುತ್ತಿದ್ದಂತೆ ಪೋಲೀಸರ ವಾಹನದ ಸೈರನ್ :- ಮಧ್ಯಾಹ್ನ 12ರ ವರೆಗೆ ಮಾತ್ರ ದಿನಸಿ ಖರೀದಿಗೆ ಅವಕಾಶ ಇದ್ದುದರಿಂದ ಗಂಟೆ 12ಆಗುತ್ತಿದ್ದಂತೆ ಪೊಲೀಸ್ ವಾಹನದಿಂದ ಲಾಕ್ ಡೌನ್ ಶುರುವಾಗುತ್ತೆ ಆಂಗಡಿ ಮಾಲೀಕರೇ ಬಾಗಿಲು ಹಾಕಿ ವ್ಯಾಪಾರ ಮಾಡುವ ಜನರೇ ತಾವು ಮನೆ ಸೇರಿಕೊಳ್ಳಿ ಎಂದು ಎಚ್ಚರಿಕೆ ಘಂಟೆಯಾಗಿ ವಾಹನದ ಸೈರನ್ ಹಾಕಿ ಎಚ್ಚರಿಸಿ ಮಧ್ಯಾಹ್ನ 12ರ ನಂತರ ಪೊಲೀಸರು ಬೀದಿಗಿಳಿದು ಲಾಕ್ ಡೌನ್ ನಿಯಮ ಪರಿಪಾಲನೆಯಲ್ಲಿ ತೊಡಗಿದರು ಜನರು ಸರ್ಕಾರದ ಆದೇಶ ಪಾಲನೆಗೆ ಸ್ಪಂದನೆ ನೀಡಿದರು.