ದಿನಸಿ ಕಿಟ್ ವಿತರಣೆ

ಬಾದಾಮಿ, ಜೂ9: ಪ್ರತಿಯೊಬ್ಬರು ಸರಕಾರದ ನಿಯಮಗಳನ್ನು ಪಾಲಿಸುವ ಮೂಲಕ ಎಲ್ಲರೂ ಮನೆಯಲ್ಲಿಯೇ ಇರಬೇಕು. ಅವಶ್ಯಕತೆ ಇದ್ದರೆ ಮಾತ್ರ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಡಾ.ರಾಘುನಾಥ ಹಾಸಲಕರ ಸಲಹೆ ನೀಡಿದರು.
ಅವರು ಮಂಗಳವಾರ ಪಟ್ಟಣದ ಭಾವಸಾರ ಕ್ಷತ್ರೀಯ ಸಮಾಜ ಬಾಂಧವರಿಗೆ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಕೊರೊನಾ ಮುನ್ನಚ್ಚರಿಕೆ ವಹಿಸಬೇಕು. ಜ್ವರ, ಕೆಮ್ಮು,ನೆಗಡಿ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಎಲ್ಲರೂ ಬಿಸಿ ನೀರು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕು. ಎಲ್ಲರೂ ಕಡ್ಡಾಯವಾಗಿ ಕೊರೊನ ಲಸಿಕೆ ಹಾಕಿಸಿಕೊಳ್ಳಿ ಎಂದು ಸಮಾಜ ಬಾಂಧವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಬಾವಸಾರ ಸಮಾಜದ ಅಧ್ಯಕ್ಷ ಪುಲಕೇಶಿ ಬೊಂಬ್ಲೆ ಮತ್ತು ಉಮೇಶ ಹವಳೆ, ಸಿ.ಕೆ.ದೇವಗಿರಿಕರ,ರಾಘು ದಯಾಪುಲೆ, ಸುಭಾಸ ಬೊಂಬಲೆ, ರವಿ ಹಂಚಾಟೆ ಹಾಜರಿದ್ದರು.