ದಿನದರ್ಶಿಕೆ ಬಿಡುಗಡೆ

ಕಲಬುರಗಿ:ಜ.16:ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀ ಸೂರ್ಯನಾರಾಯಣ ದೇವಸ್ಥಾನದ, ಶ್ರೀಯಾಜ್ಞವಲ್ಕ್ಯ ಭವನದಲ್ಲಿ ಸಮಿತಿಯ ಅಧ್ಯಕ್ಷರಾದ ಶ್ರೀಮಲ್ಹಾರರಾವ ಗಾರಂಪಳ್ಳಿ ಮತ್ತು ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ವಕೀಲ್ ಅವರು ಶುಕ್ಲಯಜುರ್ವೇದಿಯ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು.

ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಶ್ರೀಮಲ್ಹಾರರಾವ ಗಾರಂಪಳ್ಳಿ ಮಕರ ಸಂಕ್ರಾಂತಿ ಮತ್ತು ಉತ್ತರಾಯಣ ಪರ್ವಕಾಲದ ನಿಮಿತ್ಯ ರಾಜ್ಯದ ಕಣ್ವ ಬಂಧುಗಳಿಗೆ ಅನುಕೂಲವಾಗಲೆಂದು ಶ್ರೀಯಾಜ್ಞವಲ್ಕ್ಯಶ್ರಮದ, ಶ್ರೀಶುಕ್ಲಯಜುಶಾಖಾ ಟ್ರಸ್ಟ್ ಚಾಮರಾಜಪೇಟೆ ಬೆಂಗಳೂರು ವತಿಯಿಂದ ಪ್ರಕಟಿಸಿರುವ ದಿನದರ್ಶಿಕೆಯನ್ನು ಕಲಬುರಗಿಯ ಶ್ರೀಯಾಜ್ಞವಲ್ಕ್ಯ ಭವನದಲ್ಲಿ ಬಿಡುಗಡೆಗೊಳಿಸಿದ್ದು ಸಮಾಜದ ಬಂಧುಗಳ ಬಳಸಿಕೊಳ್ಳಬೇಕು ಎಂದರು.

ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ವಕೀಲ ಮಾತನಾಡಿ ಪ್ರತಿಯೊಬ್ಬರು ಪಂಚಾಂಗ ಸ್ಮರಣೆ ಮತ್ತು ಪಠಣೆ ಮಾಡಬೇಕು ಶ್ರೀಶುಕ್ಲಯಜುಶಾಖಾ ಟ್ರಸ್ಟ್, ತಿಥಿ, ನಕ್ಷತ್ರ, ಯೋಗ, ಕರಣ ಸಾಮಾನ್ಯರಿಗೂ ಅನುಕೂಲವಾಗುವಂತೆ ದಿನದರ್ಶಿಕೆ ಪ್ರಕಟಿಸಿರುವುದು ಸಂತೋಷದಾಯಕವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರಾದ ಚಂದ್ರಕಾಂತ್ ಗದಾರ, ಶಾಮಾಚಾರ್ಯಾ ಬೈಚಬಾಳ್, ಪ್ರಾಣೇಶಾಚಾರ್ಯ ಬೈಚಬಾಳ್, ಭೀಮಸೇನರಾವ್ ಸಿಂಧಗೆರಿ, ವೆಂಕಟೇಶ್ ಕುಲಕರ್ಣಿ, ಭೀಮರಾವ್ ಕುಲಕರ್ಣಿ, ಅರ್ಚಕರಾದ ಶ್ರೀರಾಮಾಚಾರ್ಯ, ಹನುಮಂತರಾವ್ ತಂಗಡಗಿ, ಶ್ಯಾಮರಾವ್ ಕುಲಕರ್ಣಿ, ಪ್ರಲ್ಹಾದ ದೇವರು, ವಾಸುದೇವರಾವ್ ಕುಳಗೇರಿ, ವಿನುತ ಜೋಶಿ, ಮಾತಾರ್ಂಡ ಹೇಮನೂರ್, ಪ್ರಮೋದ್ ಕಾಮನಟಗಿ, ಸಂತೋಷ್ ಜೋಶಿ, ಶ್ರೀನಿವಾಸ್ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.