ದಿನಚರಿ ಪುಸ್ತಕ ವಿತರಣೆ

ಆನೇಕಲ್ , ಜ ೨- ಹೊಸ ವರ್ಷದ ಅಂಗವಾಗಿ ಆನೇಕಲ್ ತಾಲ್ಲೂಕಿನಲ್ಲಿರುವ ೧೫೨ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕ್ಯಾಲೆಂಡರ್ ಮತ್ತು ದಿನಚರಿ ಪುಸ್ತಕಗಳನ್ನು ಬಮೂಲ್ ನಿರ್ದೇಶಕ ಬಿ.ಜೆ. ಆಂಜಿನಪ್ಪ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕರಾದ ಡಾ|| ಮೋಹನ್ ಕುಮಾರ್, ಆನೇಕಲ್ ಶಿಭಿರ ಕಚೇರಿಯ ಪ್ರಭಾರ ಉಪ ವ್ಯವಸ್ಥಾಪಕರಾದ ಡಾ|| ಸಿ.ಜೆ. ಸುರೇಶ್, ವ್ಯವಸ್ಥಾಪಕರಾದ ನಾಗೇಂದ್ರ ಮತ್ತು ಸಹಾಯಕ ವ್ಯವಸ್ಥಾಪಕರು ಹಾಗೂ ವಿಸ್ತರಣಾದಿಕಾರಿಗಳು, ಮತ್ತು ಸಿಬ್ಬಂದಿ ವರ್ಗ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳು ಮತ್ತು ಹಾಲು ಉತ್ಪಾದಕರು ಭಾಗವಹಿಸಿದ್ದರು.