ದಿನಗೂಲಿ ನೌಕರರ ಬಾಕಿ ವ್ಯತ್ಯಾಸ ವೇತನ ಬಟವಾಡೆ ಮಾಡಲು ಒತ್ತಾಯ

(ಸಂಜೆವಾಣಿ ವಾರ್ತೆ)
ವಿಜಯಪುರ :ಜು.7: ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ 2012 ರ ಅಡಿ ನೇಮಕವಾದ ನೌಕರರು ಬಾಕಿ ವ್ಯತ್ಯಾಸದ ವೇತನವನ್ನು ಬಟವಡೆ ಮಾಡಬೆಕೆಂದು ಒತ್ತಾಯಿಸಿ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ವಿಧೇಯಕದಡಿ ನೇಮಣೂಕಿಯಾದ ನೌಕರರ ಒಕ್ಕೂಟ ಹಾಗೂ ಸಿಐಟಿಯು ಸಂಯೋಜಿತದಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿಯವರ ಮುಖಾಂತರ ಮುಖ್ಯಮಂತ್ರಿ ಸಿದ್ರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಚಂದ್ರಶೇಖರ ಬುರಾಣಪೂರ ಮಾತನಾಡಿ, ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮ-2012 ರಡಿ ನೇಮಕವಾದ ನೌಕರರಿಗೂ ಕೊಡಬೇಕೆಂದು ಆದೇಶವಿರುತ್ತದೆ. ಆದರೆ 06ನೇ ವೇತನ ಆಯೋಗದ ಸಮಯದಲ್ಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಅಲ್ಲಗಳೆದಿದ್ದು, ಮತ್ತೆ ಸರ್ಕಾರಕ್ಕೆ ಎಲ್ಲ ಸಿಬ್ಬಂದಿಗಳು ಪದೇ ಪದೇ ತೊಂದರೆಕೊಟ್ಟು ಮನವಿ ಸಲ್ಲಿಸಿದಾಗ ದಿನಾಂಕ : 01-08-2018 ರಿಂದ ಜಾರಿಗೆ ಬರುವ ಹಾಗೆ 06ನೇ ವೇತನವನ್ನು ಬಟವಡೆ ಮಾಡಿರುತ್ತಾರೆ. ಸದ್ಯದಲ್ಲಿ ಉಲ್ಲೇಖ 03 ರ ಪ್ರಕಾರ ಸರ್ಕಾರಿ ನೌಕರರಿಗೆ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಟ್ಟಿರುತ್ತಾರೆ. ಈ ಆದೇಶದಲ್ಲಿ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕಾಗಿತ್ತು ಆದರೆ ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕೆಂದು ಉಲ್ಲೇಖಿಸದ ಕಾರಣ ಕ್ಷೇಮಾಭಿವೃದ್ಧಿ ನೌಕರರಿಗೆ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕೊಡುತ್ತಿಲ್ಲ. ಹಾಗೂ ಉಲ್ಲೇಖ-02 ಪತ್ರದನ್ವಯ ಮಾನ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು, ಇವರು ದಿನಾಂಕ : 15-02-2013 ರಿಂದ ಬಾಕಿ ವ್ಯತ್ಯಾಸದ ವೇತನ ಬಟವಡೆ ಮಾಡಿದರೆ ಆರ್ಥಿಕ ಪರಿಣಾಮದ ಬಗ್ಗೆ ಮಾಹಿತಿ ಕೇಳಿರುತ್ತಾರೆ. ಉಲ್ಲೇಖ 2 ರ ರನ್ವಯ ಈಗಾಗಲೇ ಕಲಬುರ್ಗಿ, ರಾಯಚೂರು ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಸಾಕಷ್ಟು ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ದಿನಾಂಕ : 15-02-2013 ರಿಂದ 07-05-2014ರ ವರೆಗೆ ಬಾಕಿ ವ್ಯತ್ಯಾಸದ ವೇತನವನ್ನು ಪಡೆದಿರುತ್ತಾರೆ.
ಸರ್ಕಾರಿ ಸೇವೆಯಲ್ಲಿರುವ ನೌಕರರ ಸಮನಾಗಿಯೇ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುತ್ತೇವೆ. ಆದರೂ ಕರ್ನಾಟಕ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರು ಸೇವೆಯಲ್ಲಿದ್ದಾಗ ಯಾವುದೇ ಸಹಾಯ-ಸೌಲಭ್ಯ ಸಿಗದೇ ವಂಚಿತರಾಗಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಕೊಂಡಗೂಳಿ ಮಾತನಾಡಿ, ಅಧಿಕಾರಿಗಳು ವಹಿಸಿಕೊಟ್ಟ ಕೆಲಸವನ್ನು ಚಾಚೂ ತಪ್ಪದೇ ನಿಷ್ಠೆಯಿಂದ ಕೆಲಸ ನಿರ್ವಹಿಸಿ ಕೆಲವು ದಿನಗೂಲಿ ನೌಕರರು ಮರಗಿ ಮರಗಿ ನಿವೃತ್ತಿ / ಮರಣ ಹೊಂದಿರುತ್ತಾರೆ. ಈಗಲಾದರೂ ಮಾನ್ಯರು ಕರ್ನಾಟಕ ರಾಜ್ಯದ ಎಲ್ಲ ದಿನಗೂಲಿ ಕ್ಷೇಮಾಭಿವೃದ್ಧಿ ನೌಕರರಿಗೆ ಹಾಲಿ ಮತ್ತು ನಿವೃತ್ತಿ/ಮರಣ ಹೊಂದಿದ ನೌಕರರ ಕುಟುಂಬಸ್ಥರಿಗೆ ದಿನಾಂಕ : 15-02-2013 ರಿಂದ 07-05-2014 ರ ವರೆಗೆ ಬಾಕಿ ವ್ಯತ್ಯಾಸದ ವೇತನವನ್ನು ಬಟವಡೆ ಮಾಡಲು ಹಾಗೂ ಶೇಕಡಾ 17 ರಷ್ಟು ಮಧ್ಯಂತರ ಪರಿಹಾರವನ್ನು ಕ್ಷೇಮಾಭಿವೃದ್ಧಿ ನೌಕರರಿಗೂ ಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಎಮ್ ಕೆ ಕುಲಕರ್ಣಿ ರವಿ ಡಾಮನಕರ್ ಸಿಬ್ಬಂದಿಗಳು ಭಾಗವಹಿಸಿದ್ದರು.