ದಿನಗೂಲಿ ನೌಕರರಿಗೆ ಸುರಕ್ಷಾ ಸಾಮಗ್ರಿಗಳ ನೀಡಲು ಒತ್ತಾಯ

ದಾವಣಗೆರೆ.ಮೇ.೧; ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರಿಗೆ ಸುರಕ್ಷಾ ಸಾಮಗ್ರಿಗಳನ್ನು ಒದಗಿಸಬೇಕೆಂದು ಜೈ ಕರುನಾಡ ವೇದಿಕೆ ದಾವಣಗೆರೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ಪರಶುರಾಮ ನಂದಿಗಾವಿ ಒತ್ತಾಯಿಸಿದ್ದಾರೆ. ನೈರ್ಮಲ್ಯ, ನೀರು ಸರಬರಾಜು, ಉದ್ಯಾನವನ ಪೋಷಣೆ, ಸ್ವಚ್ಛತೆ ಸೇರಿದಂತೆ ಪಾಲಿಕೆಯ ವಿವಿಧ ಶಾಖೆಗಳಲ್ಲಿ ಗುತ್ತಿಗೆದಾರರು ದಿನಗೂಲಿಯಂತೆ ನೌಕರರನ್ನು ನೇಮಿಸಿಕೊಂಡಿದ್ದಾರೆ. ಕೊರೋನಾ ತೀವ್ರತೆಯ ಈ ದಿನಗಳಲ್ಲಿ ಇಂತಹ ನೌಕರರಿಗೆ ಯಾವುದೇ ರೀತಿಯ ಸುರಕ್ಷಾ ಸಾಧನಗಳನ್ನು ಒದಗಿಸದಿರುವುದು ಕಂಡುಬರುತ್ತಿದೆ. ನೀರು ಸರಬರಾಜು ಮಾಡುವ, ಉದ್ಯಾನವನಗಳಲ್ಲಿ ಕಸ ತೆಗೆಯುವ, ಮರ-ಗಿಡ ಕತ್ತರಿಸುವ ನೌಕರರು ಕೈಗವಸು ಇತ್ಯಾದಿ ರಕ್ಷಣಾ ಸಲಕರಣೆಗಳನ್ನು ಹೊಂದದೇ ಕೆಲಸ ನಿರ್ವಹಿಸುವುದನ್ನು ಕಾಣಬಹುದು. ಇವರನ್ನು ಕೂಡ ಮನುಷ್ಯರು ಎಂಬುದಾಗಿ ಪಾಲಿಕೆ ಗುತ್ತಿಗೆದಾರರು ಪರಿಗಣಿಸದಿರುವುದು ಖಂಡನೀಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ನಗರದಲ್ಲೂ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನಾರೋಗ್ಯ ಹಿತಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಕರ್ಫ್ಯೂ ಘೋಷಿಸಿದ್ದು, ನಾಗರೀಕರ ಸ್ವಾಸ್ಥö್ಯಕ್ಕಾಗಿ ದುಡಿಯುತ್ತಿರುವ ಬಡಪಾಯಿ ದಿನಗೂಲಿ ಕಾರ್ಮಿಕರ ಜೀವರಕ್ಷಣೆ ಮಾಡಬೇಕಾದ್ದು ಕೂಡ ಸರ್ಕಾರದ ಹೊಣೆಯಾಗಿದೆ. ಆದ್ದರಿಂದ ಸಂಬAಧಪಟ್ಟ ಇಲಾಖೆಗಳು, ಗುತ್ತಿಗೆದಾರರು ದಿನಗೂಲಿ ನೌಕರರಿಗೆ ಜೀವ ರಕ್ಷಣೆ ಸಾಧನಗಳಾದ ಕೈಗವಸು, ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.