
ರಾಯಚೂರು,ಮಾ.೦೬- ನಗರಸಭೆ ವಿವಿಧ ವಿಭಾಗಗಳಲ್ಲಿ ದಿನಗೂಳಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸುವಂತೆ ನಗರಸಭೆ ಕಾರ್ಮಿಕರು ಯೋಜನೆಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರಸಭೆ ಪುರಸಭೆ ಮತ್ತು ಪಟ್ಟಣ ಪಂಚಾಯತಿ ನೇಮಕಾತಿ ೨೦೨೨ ರ ಅನ್ವಯ ವಿಶೇಷ ನೇಮಕಾತಿಯಲ್ಲಿ ಅಡಿಯಲ್ಲಿ ದಿನಗೂಳಿ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಸದರಿ ನಿಯಮಗಳ ರೀತ್ಯ ಮತ್ತು ಕಾಲಕಾಲಕ್ಕೆ ಮೇಲಾಧಿಕಾರಿಗಳು ನೀಡಿದ ಮಾರ್ಗದರ್ಶನಗಳನ್ನು ಅಳವಡಿಸಿಕೊಳ್ಳುವ ಮೂಲಕ ರಾಯಚೂರು ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ, ಖಾಟ ಇರುವ ಪೌರಾಕಾರ್ಮಿಕರ (ವಿಶೇಷ) ನಿಯಮಗಳು ೨೦೨೨ ರ ರೀತ್ಯ ಬೇರೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಪೌರಕಾರ್ಮಿಕರ ವಿಶೇಷ ನೇಮಕಾತಿಯನ್ನು ಮಾಡಿಕೊಂಡಿದ್ದು, ಹರ್ಷದಾಯಕವಾಗಿರುತ್ತದೆ.
ಮುಂದುವರೆದು ರಾಯಚೂರು ನಗರಸಭೆಯಲ್ಲಿ ಸುಮಾರು ೨೦ ವರ್ಷಗಳಿಂದ ಕಸಿಷ್ಠ ವೇತನ, ಸಮಾನ ಕೆಲಸಕ್ಕೆ ಸಮಾನ ವೇತನ ಮತ್ತು ಕ್ಷೇಮಾಭಿವೃದ್ಧಿ, ದಿನಗೂಲಿ ಆಧಾರದ ಮೇಲೆ ನೀರು ಸರಬರಾಜು ಸಹಾಯಕ, ಗಾರ್ಡನ್ ಮಾಅ, ಸ್ಯಾನಿಟರಿ ಸುಪರ್‌ವೈಜ ದಫೇದಾರರು, ವಾಹನ ಚಾಲಕರು, ಕಂಪ್ಯೂಟರ್ ಆಪರೇಟರ್, ವಾಲ್‌ಮ್ಯಾನ, ವಿದ್ಯುತ್ ವಿಭಾಗದಲ್ಲಿ ಹಾಗೂ ಇತರೆ ಕೆಲಸ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಿರುವ ದಿನಗೂಳಿ ನೌಕರರಿಗೆ ಅತೀ ಕಡಿಮೆ ಸಂಬಳ ಮತ್ತು ಜೀವನ ಭದ್ರತೆ ಇರುವುದಿಲ್ಲ.
ಇದರಿಂದ ಕುಟುಂಬ ನಿರ್ವಹಣೆ ಮಾಡಲು ಇಂದಿನ ದಿನಗಳಲ್ಲಿ ಕಷ್ಟದಾಯಕವಾಗಿರುತ್ತದೆ ಎಂದು ಅವರು ದೂರಿದರು. ವಿಷಯ ಗಂಭೀರವಾಗಿ ಪರಿಗಣಿಸಿ ಕೂಡಲೇ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಎಸ್. ರಾಜು, ರಾಘವೇಂದ್ರ, ಮಹಿಮ್ಮದ್, ಇರ್ಫಾನ್, ಸಿದ್ದರಾಮ ಸೇರಿದಂತೆ ಉಪಸ್ಥಿತರಿದ್ದರು.