ದಿನಗೂಲಿ ಆಧಾರಿತ ಕಾರ್ಮಿಕರಿಗೆ ವೇತನ ನೀಡಲು ಮನವಿ

ಹರಿಹರ. ಆ.1; ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಬಾರದೆoಬ ದೃಷ್ಟಿಯಿಂದ ದಿನಗೂಲಿ ಆಧಾರಿತ ಕಾರ್ಮಿಕರ ಪರವಾಗಿ ಸಂಘದ ಪದಾಧಿಕಾರಿಗಳು ಧರಣಿ ಮಾಡಿ ಬೇರೆ ಸಂಘ ಸಂಸ್ಥೆಯವರಿಗೆ ಮಾದರಿಯಾಗಿದ್ದಾರೆಂದು ಮಾಜಿ ಶಾಸಕ ಬಿ.ಪಿ ಹರೀಶ್ ಹೇಳಿದರು. ಆಸ್ಪತ್ರೆಯ ದಿನಗೂಲಿ ನೌಕರರಿಗೆ ಕಳೆದ 5 ತಿಂಗಳನಿoದ ವೇತನ ಬಿಡುಗಡೆಯಾಗದ ಹಿನ್ನಲೆಯಲ್ಲಿ ಧರಣಿ ನಿರತರ ಸ್ಥಳಕ್ಕೆ ಆಗಮಿಸಿ ನೌಕರರ ಮನವಿ ಸ್ವೀಕರಿಸಿ ಮಾತನಾಡಿದ ಅವರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕಕರಿಗೆ ವೇತನ ವಿಳಂಬವಾಗಿರುವ ಬಗ್ಗೆ ಕೂಡಲೇ ಸಂಬoಧಿಸಿದ ಜಿಪಂ ಸಿಇಓ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆಂದರು. ನಂತರ ಸಂಘದ ಗೌರವಾಧ್ಯಕ್ಷ ಹೆಚ್.ಕೆ.ಕೊಟ್ರಪ್ಪ ಮಾತನಾಡಿ ಸುಮಾರು 15 ವರ್ಷಗಳಿಂದ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರು ಆಸ್ಪತ್ರೆಯ ಸ್ವಚ್ಚತೆ ಕಾಪಾಡಿಕೊಂಡು ಬರುತ್ತಿದ್ದಾರೆ. ಮಹಾಮಾರಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ನೌಕರರು ಆಸ್ಪತ್ರೆಗೆ ಬರುವ ರೋಗಿಗಳ ಆರೋಗ್ಯ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷವು ಟೆಂಡರ್ ಪ್ರಕ್ರಿಯೆ ವಿಳಂಬವಾಗುತ್ತದೆ. ಇದರಿಂದ ನೌಕರರಿಗೆ ಮನವಿ ನೀಡಿದ ಮೇಲೆ ವೇತನ ಬಿಡುಗಡೆಯಾಗುತ್ತದೆ. ನೌಕರರ ಕಷ್ಟಗಳ ಬಗ್ಗೆ ನಮ್ಮ ಸಂಘದವರಿoದ ಮನವಿ ಸಲ್ಲಿಸಿದರು ಪ್ರಯೋಜನವಾಗಿರುವುದಿಲ್ಲ, ಆದರು ನಾವು ಆಸ್ಪತ್ರೆಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗಬಾರದೆoಬ ದೃಷ್ಟಿಯಿಂದ ಕೆಲಸವನ್ನು ಮಾಡಿ ಸಾಂಕೇತಿಕವಾಗಿ ಧರಣಿ ಮಾಡಿದ್ದೇವೆ. ಮಾಜಿ ಶಾಸಕರು ಕೂಡಲೇ ನೌಕರರಿಗೆ ವೇತನ ಬಿಡುಗಡೆ ಮಾಡಿಸುಲು ಕ್ರಮವಹಿಸಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಮಾಜಿ ಶಾಸಕ ಬಿಪಿ ಹರೀಶ್, ಎರಡು ದಿನಗಳಲ್ಲಿ ವೇತನ ಬಿಡುಗಡೆ ಮಾಡಿಸುವುದಕ್ಕೆ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪಂಚಾಕ್ಷರಿ ಜಿ.ಕೆ, ಕಾರ್ಯದರ್ಶಿ ಎನ್ .ಇ ಸುರೇಶ್ ಸ್ವಾಮಿ ಹಾಗೂ ಸಾಂಕೇತಿಕ ಧರಣಿಗೆ ಬೆಂಬಲ ನೀಡಿದ ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯ ಕಾರ್ಯದರ್ಶಿ ಎಕ್ಕೆಗೊಂದಿ ರುದ್ರೇಗೌಡ, ಸಮಾಜ ಸೇವಕ ಆರ್ ಮುಸ್ತಾಫ ಇತರರು ಇದ್ದರು.