ದಿನಗೂಲಿ ಆಧಾರಿತ ಆಸ್ಪತ್ರೆಯ ಕಾರ್ಮಿಕರಿಗೆ ವೇತನ ಕೂಡಲೇ ಬಿಡುಗಡೆ ಮಾಡಿ

ಹರಿಹರ.ಮಾ. 22 ; ದೇಶಾದ್ಯಂತ ಮಹಾಮಾರಿ ಕೊರುನಾ ವಿರುದ್ಧ ಹೋರಾಡುತ್ತಿರುವ ಎಲ್ಲ ಹೊರಗುತ್ತಿಗೆ ಆಧಾರಿತ ಸಿಬ್ಬಂದಿಗಳಿಗೆ ಸೇವಾ ಭದ್ರತೆ ಸಮಾನ ಕೆಲಸಕ್ಕೆ ಸಮಾನ ವೇತನ ಆರೋಗ್ಯ ವಿಮೆ ಹಾಗೂ ಇನ್ನಿತರ ನೌಕರರ ಸಮಸ್ಯೆಗಳನ್ನು ನಿವಾರಿಸಬೇಕು ಹಾಗೂ ವೇತನ ಬಿಡುಗಡೆ ಮಾಡಬೇಕೆಂದು ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರ ಸಂಘ ಮನವಿ ಮಾಡಿದೆ.ಪ್ರತಿ 5ಅಥವಾ 6ತಿಂಗಳಿಗೊಮ್ಮೆ ವೇತನ ಬಿಡುಗಡೆಗೊಂಡಿರುವುದಿಲ್ಲ ಕಳೆದ ಹದಿನೈದು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಇಪ್ಪತ್ತೈದು ಹೊರ ಗುತ್ತಿಗೆ ಆಧಾರಿತ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡುತ್ತಾ ಬಂದಿರುತ್ತಾರೆ ಅವರಿಗೆ ಸಕಾಲಕ್ಕೆ ಸರಿಯಾಗಿ ವೇತನ ಪಿಎಫ್ ಆರೋಗ್ಯ ವಿಮೆ ಇನ್ನಿತರ ಸೌಲಭ್ಯಗಳು ಮಾತ್ರ ದೊರೆಯುತ್ತಿಲ್ಲ ಪ್ರತಿ ಬಾರಿಯೂ ಈ ಪರಿಸ್ಥಿತಿಯಾದರೆ ಅವರ ಜೀವನ ಬೀದಿಗೆ ಬೀಳುತ್ತದೆ ಮಹಾಮಾರಿ ಕೊರೊನಾ ವೈರಸ್ ಸಂದರ್ಭದಲ್ಲೂ ಹಗಲಿರುಳು ಸಾರ್ವಜನಿಕರ ಸೇವೆಗಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರಿಗೆ ಮಾತ್ರ ವೇತನ ಸಿಗುವುದು ಇರುವುದು ನೋವಿನ ಸಂಗತಿಯಾಗಿದೆ ಪ್ರತಿ ಬಾರಿಯೂ ಶಾಸಕರಿಗೂ ಮತ್ತು ಸಂಬಂಧಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ನೀಡುತ್ತೇವೆ ಆದರೆ ಮನವಿ ಸ್ವೀಕರಿಸಿ ಅವರಿಗೆ ಕಾಲಾವಕಾಶ ಕೇಳಿ ಮುಂದಕ್ಕೆ ತಳ್ಳಿ ಬೀಸೋದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎಂಬುವ ಗಾದೆಯ ಹಾಗೆ ನೌಕರರಿಗೆ ಸಬೂಬನ್ನು ಹೇಳುತ್ತಾ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಎರಚುವ ಹಾಗೆ ಮಾಡುತ್ತಿದ್ದಾರೆ ಈ ರೀತಿ ಪರಿಸ್ಥಿತಿ ಆದರೆ ಅವರ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿರುತ್ತದೆ    ಮತ್ತು ಮೈಸೂರು ಏಜೆನ್ಸಿಯವರು ಕಳೆದ 1ವರ್ಷದಿಂದ ವೇತನ ಬಿಡುಗಡೆ ಮಾಡಬೇಕಾದರೆ ನಾವು ಮನವಿಯನ್ನು ಸಲ್ಲಿಸಬೇಕು ನಂತರ ವೇತನ ಬಿಡುಗಡೆಯಾಗುತ್ತದೆ ಮತ್ತೆ ಅದೇ ಪರಿಸ್ಥಿತಿ ಈಗ ಆಗಿದೆ ಕಳೆದ 5ತಿಂಗಳಿನಿಂದ ವೇತನ ಬಿಡುಗಡೆ ಆಗಿರುವುದಿಲ್ಲ .ಮತ್ತು  5ತಿಂಗಳ ವೇತನದಲ್ಲಿ 2ತಿಂಗಳ ವೇತನವನ್ನು ನೌಕರರ ಖಾತೆಗೆ ಜಮಾ ಮಾಡಿದ್ದಾರೆ ಅದರಲ್ಲಿ 25 ಜನ ನೌಕರರಿಗೆ  ಐದರಿಂದ 6ಸಾವಿರ ರೂಗಳನ್ನು ಕಡಿಮೆ  ಮಾಡಿ ಅವರ ಖಾತೆಗೆ ಹಾಕಿದ್ದಾರೆ ಇದರಿಂದ ಸ್ವಚ್ಛತಾ ಕಾರ್ಮಿಕರಿಗೆ ಅನ್ಯಾಯವಾಗಿದೆ .ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಗುತ್ತಿಗೆ ದಾರರಿಗೆ ಸೂಚನೆ ನೀಡಿ ಕೂಡಲೇ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪಂಚಾಕ್ಷರಿ .ಕಾರ್ಯದರ್ಶಿ ಎನ್ ಎಂ ಸುರೇಶ್ ಸ್ವಾಮಿ. ಶಾಸಕರಿಗೆ ಮನವಿಯನ್ನು ಸಲ್ಲಿಸಿದರುನೌಕರರ ಸಮಸ್ಯೆಯನ್ನು ಆಲಿಸಿದ ಶಾಸಕ ಎಸ್ ರಾಮಪ್ಪ ಮನವಿ ಸ್ವೀಕರಿಸಿ ಸ್ಥಳದಲ್ಲೇ ದೂರವಾಣಿ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಇವರಿಗೆ ಪ್ರತಿ ಬಾರಿಯೂ ಸಾರ್ವಜನಿಕ ಆಸ್ಪತ್ರೆಯ ಹೊರಗುತ್ತಿಗೆ ನೌಕರರ ವೇತನದ ಸಮಸ್ಯೆ ಗಳು ಆಗುತ್ತಿದೆ ನೀವು ಏನು ಕೆಲಸ ಮಾಡುತ್ತಿದ್ದೀರಾ ಯಾವ ಗುತ್ತಿಗೆದಾರನಿಗೆ ಟೆಂಡರ್ ನೀಡಿದ್ದೀರಾ ವರ್ಷಪೂರ್ತಿ ವೇತನದ ಸಮಸ್ಯೆಗಳ ಬಗ್ಗೆ ನಾವು ಸಾಕಷ್ಟು ಬಾರಿ ಹೇಳಿದ್ದೇವೆ ನೀವು ನಿರ್ಲಕ್ಷ್ಯ ವಹಿಸುತ್ತಿದ್ದೀರಿ ಇದನ್ನು ನಾನು ಸದನದಲ್ಲಿ ಚರ್ಚೆ ಮಾಡಬೇಕಾಗುತ್ತದೆ ಅದಕ್ಕೆ ಅವಕಾಶ ಮಾಡಿಕೊಡದೆ ಟೆಂಡರದಾರರು ನಿಮ್ಮ ಸಮಸ್ಯೆಯೂ ನನಗೆ ಬೇಕಿಲ್ಲ ಕೂಡಲೇ ಅವರ ವೇತನ ಬಿಡುಗಡೆ ಗೊಳಿಸಬೇಕೆಂದು ಸೂಚನೆ ನೀಡಿದರು 
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಶಂಕರ್ ಖಟಾವ್ಕರ್ .ಎಂಎಸ್ ಬಾಬುಲಾಲ್ .ಮಹಬೂಬ್ ಬಾಷಾ .ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಎಲ್ ಹನುಮಾನಾಯಕ್ . ಆಸ್ಪತ್ರೆಯ ವೈದ್ಯರು ಹೊರಗುತ್ತಿಗೆ ನೌಕರ ಸಿಬ್ಬಂದಿ ವರ್ಗದವರು ಇತರರು ಇದ್ದರು