ದಿನಕೂಲಿ ಕಾರ್ಮಿಕರು, ನೌಕರರಿಗೆ ದಿನಸಿ ಕಿಟ್ ವಿತರಣೆ

ಮೈಸೂರು. ಮೇ.02: ಸುವರ್ಣ ಬೆಳಕು ಫೌಂಡೇಷನ್ ಮತ್ತು ಫೈಟರ್ ಸ್ಪೋಟ್ರ್ಸ್ ವೇರ್, ಕುವೆಂಪುನಗರ ಮೈಸೂರು ಸಹಭಾಗಿತ್ವದಲ್ಲಿ ಕೆ.ಆರ್.ಮೊಹಲ್ಲಾ, ನಾರಯಣ ಶಾಸ್ತ್ರಿ ರಸ್ತೆ, ಸುಣ್ಣದಕೇರಿ ಕೆಲ ಬಡ ನಿವಾಸಿಗಳಿಗೆ, ದಿನಕೂಲಿ ಕಾರ್ಮಿಕರು, ನೌಕರರಿಗೆ, ಪೈಟರ್ ಸ್ಪೋಟ್ರ್ಸ್ ವೇರ್ ಮಾಲೀಕರಾದ ಮಂಜುನಾಥ ಅವರಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಕೋವಿಡ್ ಮಹಾಮಾರಿ 2ನೇ ಅಲೆಯ ಹಿನ್ನಲೆಯಲ್ಲಿ ಮೈಸೂರಿನ ದಿನಗೂಲಿ ನೌಕರರ ಹಾಗು ಕಾರ್ಮಿಕರ ನೌಕರರ ದಿನಗಳು ಕಷ್ಟಕರವಾಗಿದ್ದು , ನಿತ್ಯ ಬಳಸುವ ಅವಶ್ಯಕತೆಗಳನ್ನು ಕೂಡ ಹೊಂದಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ದಿನಗೂಲಿ ನೌಕರರು, ಆಟೋ ಚಾಲಕರು, ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಅಂದು ದುಡಿದಿದ್ದು ಅಂದೆ ಖರ್ಚು ಆಗುತ್ತಿದೆ.
ಜೊತೆಗೆ ಬದುಕಿನ ಇನ್ನಿತರ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ಸಂಕಷ್ಟ ಎದುರಿಸುವಂತಾಗಿದೆ. ಸ್ಥಳಿಯ ನಿವಾಸಿಯೊಬ್ಬರು ನಾವು ಬಾಡಿಗೆ ಮನೆ ವಾಸ ಮಾಡುತಿದ್ದು ಬಾಡಿಗೆ ಕಟ್ಟಲು ಸಾಧ್ಯ ಆಗುತ್ತಿಲ್ಲ ನಮ್ಮ ಬಳಿ ಯಾವುದೇ ಹಣ ಇಲ್ಲದಂತಾಗಿದೆ ನಮಗೆ ಏನಾದರೂ ಸಹಾಯ ಮಾಡುವಿರಾ ಎಂದು ತಮ್ಮ ಕಷ್ಟದ ದಿನಗಳನ್ನು ಸುವರ್ಣ ಬೆಳಕು ಟ್ರಸ್ಟ್ ಅರೊಂದಿಗೆ ಹಂಚಿಕೊಂಡರು.
ಈ ವಿಷಯವನ್ನು ಪೈಟರ್ ಸ್ಪೋಟ್ರ್ಸ್ ವೇರ್‍ನ ಮಾಲೀಕರಾದ ಮಂಜುನಾಥ ಅವರೊಂದಿಗೆ ಚರ್ಚಿಸಿದಾಗ ಅವರು ಸ್ವತಃ ಬಡಜನರಿಗೆ ಸಹಾಯ ಹಸ್ತಚಾಚಲು ಭರವಸೆ ನೀಡಿದರು. ಆ ಮಾತಿನಂತೆ ಇಂದು ಬೆಳಿಗ್ಗೆ ಪೈಟರ್ ಸ್ಪೋಟ್ಸ್ ವೇರ್ ಮಾಲೀಕರಾದ ಮಂಜುನಾಥ ಅವರು ಸುಣ್ಣದಕೇರಿ ಕೆಲ ಬಡ ನಿವಾಸಿಗಳ ಮನೆಗೆ ಹೋಗಿ ದಿನಸಿ ಕಿಟ್ ವಿತರಣೆ ಮಾಡಿದರು.ಇಂತಹ ಸಂದರ್ಭದಲ್ಲಿ ಮಾನವೀಯತೆಯ ಮತ್ತು ಸೇವೆ ಸಲ್ಲಿಸಬೇಕಾದ ಸುಸಂದರ್ಭ ಎಂದರು ಸಮಾಜಕ್ಕೆ ಒಳ್ಳೆಯ ಸಂದೇಶ ಕೂಡ ಸಾರಿದರು.
ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷರಾದ ಮಹೇಶ್ ನಾಯಕ್, ಕಾರ್ಯದರ್ಶಿ ಮಂಜುನಾಥ ಬಿ.ಆರ್ ಹಾಗೂ ಸುವರ್ಣ ಬೆಳಕು ಟ್ರಸ್ಟ್‍ನ ಗೌರವಾನ್ವಿತ ಸದಸ್ಯರಾದ ಎಸ್.ಪುರುಷೋತ್ತಮ್, ಅಗ್ನಿ, ಹರೀಶ್, ಎಸ್. ಮಹೇಶ್ ಬಿ.ಎಂ, ಶಿವು ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.