ದಿನಕರ ದೇಸಾಯಿಯವರು ಚುಟುಕುಗಳ ಬ್ರಹ್ಮಃ ಡಾ. ಕಲಘಟಗಿ

ವಿಜಯಪುರ, ನ.10-ಕನ್ನಡ ಸಾರಸ್ವತ ಲೋಕದಲ್ಲಿ ಚುಟುಕುಗಳ ಬ್ರಹ್ಮ ಎಂದೆ ಖ್ಯಾತರಾಗಿದ್ದ ದಿನಕರ ದೇಸಾಯಿಯವರು ತಮ್ಮ ಬರಹದ ಮೂಲಕ ಸಮಾಜದ ಪರಿವರ್ತನೆಗೆ ಹಲವಾರು ಮೌಲ್ಯಾಧಾರಿತ ಚುಟುಕುಗಳನ್ನು ರಚಿಸಿದ್ದಾರೆ. ಅವರೊಬ್ಬ ಕನ್ನಡ ನಾಡಿನ ಪ್ರಮುಖ ಸಾಹಿತಿಗಳಲ್ಲೊಬ್ಬರು ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಡೀನ್ ಎಸ್.ಬಿ. ಕಲಘಟಗಿ ಹೇಳಿದರು.
ಅವರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಏರ್ಪಡಿಸಿದ್ದ ಚುಟುಕು ಕವಿಗೋಷ್ಠಿ ದತ್ತಿ ನೂರೊಂದು ಕವನ ಸಂಕಲನ ಲೋಕಾರ್ಪಣೆ ಮುದಕಯ್ಯನಮಠ ಮತ್ತು ಶಂಕ್ರಯ್ಯನಮಠ ಸಯ್ಯದಅಹ್ಮದಮೀಯಾ ವಾರಿಸಮೀಯಾ ಖಾದ್ರಿ ಪೌಂಡೆಶನ್ ಲಿಂ. ಕುಂತಿದೇವಿ ಚಂ. ಅಕ್ಕಲಕೋಟ ಲಿಂ. ವಾಯ್.ಎಸ್. ವಿಜಯಲಕ್ಷ್ಮೀ ಸೂರ್ಯನಾರಾಯಣ ದತ್ತಿ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಿನಕರ ದೇಸಾಯಿಯವರು ಸಮಾಜಸೇವೆಗಾಗಿ ಆಯ್ದುಕೊಂಡ ಕ್ಷೇತ್ರಗಳು ಹಲವಾರು ನವೋದಯ ಕಾಲಘಟ್ಟದ ಹೋರಾಟಗಾರರಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯೆಯ ಪ್ರಸರಣಕ್ಕಾಗಿ ವಿದ್ಯಾ ಸಂಸ್ಥೆಗಳ ಸ್ಥಾಪಕನಾಗಿ ಅದರೊಂದಿಗೆ ಜಿಲ್ಲೆಯ ರೈತರನ್ನು ಒಗ್ಗೂಡಿಸಿ ರೈತರಲ್ಲಿ ಜಾಗೃತಿ ಮೂಡಿಸಿದ ರೈತನಾಯಕನಾಗಿ ಬಹುಮುಖಿ ವ್ಯಕ್ತಿತ್ವದ ಮೂಲಕ ಹಲವಾರು ಚುಟುಕು ಕವನಗಳನ್ನು ರಚಿಸಿ ಅವುಗಳ ಮೇಲೆ ಘಾಡ ಪ್ರಭಾವಚಲ್ಲಿ ಹೋಗಿದ್ಧಾರೆ. ಭಾವಗೀತೆ, ಭಕ್ತಿಗೀತೆ, ಕಥಾಕವನ, ಮಕ್ಕಳ ಸಾಹಿತ್ಯದಲ್ಲಿಯೂ ಕೂಡ ಬೆಳಕು ಮೂಡಿಸಿದರು. ಆದ್ದರಿಂದಲೇ ದಿನಕರ ದೇಸಾಯಿಯವರು ಚುಟುಕು ಕವನಗಳ ಬ್ರಹ್ಮ ಏನಿಸಿಕೊಂಡಿದ್ದಾರೆ ಎಂದರು.
ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಅರಣ್ಯ ನಮ್ಮ ಪ್ರಕೃತಿಯ ಅತ್ಯಂತ ಪ್ರಮುಖವಾದ ಅಂಗ. ಅದು ಅಘಾದ ಸಸ್ಯಸಂಪತ್ತನ್ನು ಸಾವಿರಾರು ಜಾತಿ ಮರಗಳನ್ನು ಹಾಗು ಲಕ್ಷಾಂತರ ಜೀವವೈವಿದ್ಯೆಗಳಿಗೆ ಆಶ್ರಯವನ್ನು ನೀಡುತ್ತದೆ ಆದರೆ ಮಾನವಜೀವಿ ಅರಣ್ಯಗಳ ಮಹತ್ವವನ್ನು ತಿಳಿಯದೆ ಅದನ್ನು ನಾಶ ಪಡಿಸಿ ದೊಡ್ಡ ದೊಡ್ಡ ಕಟ್ಟಡಗಳನ್ನು ಮತ್ತು ಕಾರ್ಖಾನೆಗಳನ್ನು ನಿರ್ಮಾಣ ಮಾಡಿ ಪ್ರಕೃತಿಯನ್ನು ಮಲಿನಗೊಳಿಸುತ್ತಿದ್ದಾನೆ. ಪ್ರಸ್ತುತ ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪಗಳಿಗೆ ಮುಖ್ಯವಾಗಿ ಮನುಷ್ಯನ ಈ ದುಷ್ಕøತ್ಯವೇ ಕಾರಣವಾಗಿದೆ ಎಂದರು.
ಅರಣ್ಯ ಇಲಾಖೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಕ್ಕಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಕೊಡಮಾಡುವ 65ನೇ ಕನ್ನಡ ರಾಜ್ಯೋತ್ಸವ ಸನ್ಮಾನ ಸ್ವೀಕರಿಸಿ ಆಲಮಟ್ಟಿಯ ಕೃಷ್ಣಾಭಾಗ್ಯ ಜಲ ನಿಗಮನಿಯಮಿತ ಅರಣ್ಯ ವಿಭಾಗದ ಅಧಿಕಾರಿ ಆರ್.ಎಸ್. ಪ್ಯಾಟಿಗೌಡರ ಮಾತನಾಡಿ, ಅರಣ್ಯಗಳ ಸಂರಕ್ಷಣೆ ಮತ್ತು ಪಾಳುಬಿದ್ದ ಅರಣ್ಯಗಳ ಗುರುತಿಸಿ ಅವುಗಳ ಪುನರನಿರ್ಮಾಣ ಮಾಡಬೇಕಾದ ತುರ್ತುಕಾರ್ಯ ಅಗತ್ಯವಿದೆ ಎಂದರು.
ನಗರದ ಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ಕುಮಾರಿ ಸಂಯುಕ್ತಾ ಎಸ್. ಪಾಟೀಲ ಮಾತನಾಡಿ ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಜೀವನದ ಯಶಸ್ವಿಗೆ ದೃಢತೆ ಹಾಗೂ ಉತ್ತಮ ಗುಣಗಳು ಅನಿವಾರ್ಯವಾಗಿವೆ. ಉತ್ತಮ ಗುಣಗಳು ಎಂದರೆ ಸರಳ ಸ್ವಭಾವ, ಗುಣ, ಧರ್ಮ, ಸದಾಚಾರ, ಮಾನವೀಯತೆ, ಜೀವನ ರೀತಿ, ಮುಂತಾದವುಗಳು ಸಾಹಿತ್ಯದ ಅರಿವಿನಿಂದ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಂಡೆಪ್ಪ ತೇಲಿ ಮಾತನಾಡಿ ಕನ್ನಡ ನಾಡು ಸಂಪತ್ಭರಿತ ಬೀಡು, ಪ್ರತಿಯೊಬ್ಬರು ಕನ್ನಡ ಉಳಿಸಿ ಬೆಳೆಸಲು ಮುಂದಾಗಬೇಕಾಗಿದೆ. ಇಲ್ಲಿ ನಡೆದ ಕಾರ್ಯಕ್ರಮದ ಪ್ರತಿಯೊಂದು ಚುಟುಕು ಕವನಗಳು ಅರ್ಥಗರ್ಭಿತ, ಮೌಲ್ಯಾಧಾರಿತ, ಅರ್ಥಪೂರ್ಣ,ಪರಿಪೂರ್ಣ ಮತ್ತು ಪರಿಣಾಮಕಾರಿಯಾಗಿದ್ದವು. ನಾಡಿನ ಸುತ್ತಲಿನ ಸಂಪತ್ಭರಿವಾದ ವಿಚಾರವನ್ನು ವಳಗೊಂದು ಆದರಿಸಿದ ಕವನಗಳಲ್ಲಿ ಪ್ರತಿಯೊಂದು ವಿಚಾರಗಳು ಮಾಹಿತಿಗಳು ಅಡಕವಾಗಿದ್ದವು. ನಾವೆಲ್ಲರೂ ಕನ್ನಡ ನಾಡು ನುಡಿ, ನೆಲ, ಜಲ, ಭಾಷೆ, ಸಾಹಿತ್ಯ, ಸಂಸ್ಕøತಿ, ಸಂಸ್ಕಾರ, ಪರಂಪರೆ, ಗಟ್ಟಿಗೊಳಿಸಿ ಕನ್ನಡ ನಾಡನ್ನು ಸುಂದರ ತಾಣವನ್ನಾಗಿ ಕಟ್ಟವಲ್ಲಿ ಪ್ರಯತ್ನಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಲಮಟ್ಟಿ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಅಧಿಕಾರಿಗಳಾದ ಆರ್.ಎಸ್. ಪ್ಯಾಟಿಗೌಡರ, ಬಿ.ಪಿ. ಚವ್ಹಾಣ, ಮಹೇಶ ಪಾಟೀಲ, ಮತ್ತು ಶಾಂತಾ ಜೋಗೆನ್ನವರನ್ನು ಸನ್ಮಾನಿಸಲಾಯಿತು.
ಚುಟುಕು ವಾಚಿಸಿದವರು ಪ್ರಭಾಕರ ಖೇಡದ, ಡಾ. ಅನೀಲಕುಮಾರ ಅಲ್ಲಾಳಮಠ, ಸುಮಾ ಗಾಜರೆ, ಯಮನೂರಪ್ಪ ಅರಬಿ, ಶ್ರೀರಂಗ ಪುರಾಣಿಕ, ಪ್ರಕಾಶ ಜಹಾಗೀರದಾರ, ರಾಹುಲ ಮರಳಿ, ಸಂಜೀವಕುಮಾರ ಬಬಲೇಶ್ವರ ಮಹಾದೇವಿ ಪಾಟೀಲ, ಡಾ. ಸುರೇಶ ಕಾಗಲಕರೆಡ್ಡಿ, ಎಲ್.ಎಲ್. ತೊರವಿ, ಶ್ರೀ.ಶ. ಹಟಗಿ ಮುಂತಾದವರು ಚುಟುಕು ಕವನ ವಾಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಬಸವರಾಜ ಕುಂಬಾರ, ಎಸ್.ಎಸ್. ಖಾದ್ರಿಇನಾಮದಾರ, ರಂಗನಾಥ ಅಕ್ಕಲಕೋಟ, ಡಾ. ರಾಜಕುಮಾರ ಜೊಲ್ಲೆ, ಶಕುಂತಲಾ ಹಿರೇಮಠ, ಮಂಜುಳಾ ಹಿಪ್ಪರಗಿ, ಶ್ರೀಕಾಂತ ನಾಡಗೌಡರ, ವಿಠ್ಠಲ ಪೂಜಾರಿ, ಎಸ್.ವಾಯ್. ನಡುವಿನಕೇರಿ, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜಗದೀಶ ಸಾಲಳ್ಳಿ, ಬಸಲಿಂಗಪ್ಪ ಬನಸೋಡೆ, ಶಿವಾಜಿ ಮೋರೆ, ಬಸವರಾಜ ಕಾಗಲಕರ, ಅನಿಲ ಪವಾರ, ಸದಾಶಿವ ಪೂಜಾರಿ, ಕೃಷ್ಣಾ ಅಗರಖೇಡ ಮುಂತಾದವರು ಉಪಸ್ಥಿತರಿದ್ದರು.