ದಿದ್ದಿಗೆ ಪಿಡಿಒ ಅಮಾನತಿಗೆ ಒತ್ತಾಯ

 ದಾವಣಗೆರೆ.ಏ.೧೮; ಜಗಳೂರು ತಾಲ್ಲೂಕಿನ ದಿದ್ದಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರ್ಲಕ್ಷಣ ಧೋರಣೆ ಖಂಡಿಸಿ ಗ್ರಾ.ಪಂಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಜಿ.ಆರ್ ರಾಘವೇಂದ್ರ ಗೌಡ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ದಿದ್ದಿಗೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಉರುಕಟ್ಟೆ ಗ್ರಾಮದಲ್ಲಿ ಬಸವರಾಜ ಎಂಬುವವರು ಸೂಕ್ತ ದಾಖಲಾತಿ ಇಲ್ಲದೆ ಅಕ್ರಮವಾಗಿ ದೌಜನ್ಯದಿಂದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಹಾಗು ಅಕ್ಕಪಕ್ಕದ ಮನೆಯವರಾದ ಶ್ರೀಮತಿ ಗೌರಮ್ಮ ಹಾಗೂ ಎನ್.ಎಂ. ಮಹಾದೇವಪ್ಪನವರ ಮನೆಯ ಅಂಗಳದಲ್ಲಿ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಲು ಜೆ.ಸಿ.ಬಿ.ಯಿಂದ ಬುನಾದಿ ತೆಗೆದಿದ್ದರು.೨೦೨೦ರ
ಸೆಪ್ಟಂಬರ್ ೧೫ ರಂದು ಅಕ್ಕಪಕ್ಕದವರು ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಬಸವರಾಜ ಬಗ್ಗೆ ದೂರು ನೀಡಿದ್ದರು. ನಂತರ ಪಿಡಿಒ ಗ್ರಾಮಕ್ಕೆ ಭೇಟಿಕೊಟ್ಟು ತಕ್ಷಣ ಬುನಾದಿ ತೆಗೆಯುವುದನ್ನು ನಿಲ್ಲಿಸಿದರು ಹಾಗೂ ಜಾಗದ ದಾಖಲಾತಿಗಳನ್ನು ಕೊಡುವಂತೆ ಬಸವರಾಜಗೆ ಸೂಚಿಸಿದರು , ಆದರೆ ಸ್ವಲ್ಪ ದಿನಗಳ ನಂತರ ಅಭಿವೃದ್ಧಿ ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷ÷್ಯ ವಹಿಸಿದ್ದರಿಂದ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಆದಕಾರಣ ಇಒಗೆ ದೂರು ನೀಡಿದ್ದೇವು ಆದರೆ ಬಸವರಾಜ್ ಅವರ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಪಿಡಿಒ ನಿಖರವಾದ ಪರಿಶೀಲನೆ ಮಾಡುತ್ತಿಲ್ಲ. ತಕರಾರಿರುವ ಜಾಗದ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಸೂಕ್ತ ದಾಖಲಾತಿಗಳಿದ್ದರೂ ಕೂಡ ಇಲ್ಲ ಎಂದು ನುಣುಚಿಕೊಳ್ಳುವ ರೀತಿಯಲ್ಲಿ ಕೆಲಸಮಾಡುತ್ತಿದ್ದಾರೆ ಆದ್ದರಿಂದ ಈ ಕೂಡಲೇ ಪಿಡಿಒ ಅವರನ್ನು ಅಮಾನತು ಮಾಬೇಕು ಇಲ್ಲವಾದಲ್ಲಿ ದಿದಿಗೆ ಗ್ರಾ.ಪಂ ಗೆ ಬೀಗಹಾಕಿ ಪ್ರತಿಭಟನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್, ಮಹಾಲಿಂಗಪ್ಪ ಇದ್ದರು.