ದಿಢೀರ್ ಸ್ಟೀಲ್ ಬ್ರಿಡ್ಜ್ ಮೇಲೆ ಭಾರೀ ವಾಹನಗಳ ಪ್ರವೇಶ ಬಂದ್

ಬೆಂಗಳೂರು, ಸೆ.3- ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ
ನಿರ್ಮಾಣವಾದ ಶಿವಾನಂದ ಸರ್ಕಲ್‌ ಸ್ಟೀಲ್ ಸೇತುವೆ ಮೇಲೆ ದಿಢೀರ್ ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.ಇಂದಿನಿಂದ ಭಾರೀ ವಾಹನ ಓಡಾಡದಂತೆ ಫ್ಲೈಓವರ್ ಮೇಲೆ ಹೈಟ್ ಲಿಮಿಟ್ ಗ್ಯಾಂಟ್ರಿಯನ್ನು ಅಳವಡಿಸಲಾಗಿದೆ. ಹಾಗಾಗಿ ಬಸ್ಸು, ಲಾರಿ, ಟ್ರಕ್ ಸಂಚಾರ ತಾತ್ಕಾಲಿಕವಾಗಿ ನಿಂತಿದೆ.ಆದರೆ, ಕೇವಲ ಬೈಕ್, ಕಾರು ಮಾತ್ರ ಸಂಚರಿಸಲು ಬಿಬಿಎಂಪಿ ಅವಕಾಶ ಮಾಡಿಕೊಟ್ಟಿದೆ. ಇನ್ನೂ, ಹೊಸ ಬ್ರಿಡ್ಜ್ ಮೇಲೆ ಏಕಾಏಕಿ “ಘನ ವಾಹನಗಳ ಪ್ರವೇಶಕ್ಕೆ ನಿಷೇಧ” ಹೇರಿದರಿಂದ ಕಳಪೆ ಕಾಮಗಾರಿ ಆರೋಪ ಬಂದಿದೆ.ಜನರ ಆಕ್ರೋಶದ ಬೆನ್ನಲ್ಲೇ ಬಿಬಿಎಂಪಿ ಗುಣಮಟ್ಟ ಪರೀಕ್ಷೆಗಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಮೊರೆ ಹೋಗಿದೆ ಎನ್ನಲಾಗಿದೆ. ಮತ್ತೊಂದೆಡೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಇಂದು ರಾತ್ರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.