ದಿಡ್ಡಿ ಬಸವೇಶ್ವರ ರಥೋತ್ಸವ ಸಂಪನ್ನ

ಸಿರವಾರ,ಮೇ.ಂ೧- ತಾಲೂಕಿನ ಅತ್ತನೂರು ಗ್ರಾಮದ ಆರಾಧ್ಯದೈವ ಶ್ರೀದಿಡ್ಡಿ ಬಸವೇಶ್ವರ ಜೋಡು ರಥೋತ್ಸವ ಅದ್ದೂರಿಯಾಗಿ ನಡೆಯಿತು.
ದಿಡ್ಡಿ ಬಸವಣ್ಣ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ, ಭಕ್ತರಿಂದ ಹರಕೆ ಪೂರೈಕೆ, ಸಂಜೆ ಡೊಳ್ಳು, ಬಾಜಿ, ಭಜನೆ, ಕುಂಭ, ಕಳಸ, ಪಲ್ಲಕ್ಕಿ ಉತ್ಸವ ಜರುಗಿತು.
ಈ ಸಂದರ್ಭದಲ್ಲಿ ಅಭಿನವಶ್ರೀ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠದ ಪೂಜ್ಯರು, ಗಣ್ಯಮಾನ್ಯರು, ದೇವಸ್ಥಾನದ ಸಮಿತಿಯ ಅಧ್ಯಕ್ಷ-ಉಪಾಧ್ಯಕ, ಪದಾಧಿಕಾರಿಗಳು, ಸಹಸ್ರಾರು ಭಕ್ತರು ಭಾಗವಹಿಸಿದ್ದರು.