`ದಿಗ್ವಿಜಯ’ ಬಿಡುಗಡೆಗೆ ಸಜ್ಜು

ವರದಿಗಾರೆನೊಬ್ಬ,ಅರೆ ಹುಚ್ಚನನ್ನು ಮುಂದಿಟ್ಟುಕೊಂಡು ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ ಮಾಡಿಸುವ ಕಥಾಹಂದರ ಹೊಂದಿರುವ “ ದಿಗ್ವಿಜಯ” ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಇದೇ ತಿಂಗಳು ತೆರೆಗೆ ಬರಲಿದೆ.

ದುರ್ಗಾ ಪಿ.ಎಸ್.  ಹಾಗೂ ಹೊನ್ನವಳ್ಳಿ ಶ್ರೀಕಾಂತ್ ಜಂಟಿಯಾಗಿ ನಿರ್ದೇಶಿಸಿರುವ ದಿಗ್ವಿಜಯ ಚಿತ್ರಕ್ಕೆ “ಯು” ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರದ ನಾಯಕನ ತಂದೆ, ತಾಯಿ ರೈತರು, ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್‍ನಿಂದ ನಾಯಕನ ಗೆಳೆಯ ಅರೆ ಹುಚ್ಚನಾಗುವ ತಿರುಳು ಹೊಂದಿದೆ,

ಜಯಪ್ರಭು ಆರ್. ಲಿಂಗಾಯತ್,  ಅರುಣ್ ಸುಕದರ್ ಹಾಗೂ  ಹರೀಶ್ ಆರ್.ಸಿ. ನಿರ್ಮಾಣ ಮಾಡಿದ್ದಾರೆ. ಗೋವಾ ಫಿಲಂ ಫೆಸ್ಟಿವಲ್ ಹಾಗೂ ಜಮ್ಮು ಕಾಶ್ಮೀರದಲ್ಲಿ ನಡೆದ ಚಿತ್ರೋತ್ಸವದಲ್ಲಿ  ಪ್ರದರ್ಶನಗೊಂಡು ಪ್ರಶಸ್ತಿ,ಪ್ರಶಂಸೆ ಪಡೆದಿದೆ.

ಜಯಪ್ರಭು ಆರ್ ಲಿಂಗಾಯತ್ ಚಿತ್ರದ ನಾಯಕ, ಸ್ನೇಹ ನಾಯಕಿ ಉಳಿದಂತೆ ಸುಚೇಂದ್ರ ಪ್ರಸಾದ್,ಪಟ್ರೆ ನಾಗರಾಜ್,  ಹೊನ್ನವಳ್ಳಿ ಕೃಷ್ಣ, ಹೊನ್ನವಳ್ಳಿ ಶ್ರೀಕಾಂತ್ ,ಕಿಲ್ಲರ್ ವೆಂಕಟೇಶ್, ಶಿವಕುಮಾರ್ ಆರಾಧ್ಯ, ರಾಹುಲ್,ಆಕಾಶ್ ಎಂ ಪಿ, ರಮಿತ ರಿತಿಕಯಲ್ಲಪ್ಪ ಮುಂತಾದರಿದ್ಧಾರೆ.

ಚಿತ್ರವನ್ನು ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರಿಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ 5 ಹಾಡುಗಳಿದ್ದು ಹರ್ಷ ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣವಿದೆ.