
ಭೋಪಾಲ್, ಮಾ. ೧೦-ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ ಪರಿಣಾಮ ಕಾರು ಚಾಲಕನನ್ನು ಪೊಲೀಸರು ಬಂಧಿಸಿರುವ ಘಟನೆ ರಾಜ್‌ಗಢದಲ್ಲಿ ನಡೆದಿದೆ.
ರಾಜ್‌ಗಢ್ ಜಿಲ್ಲೆಯ ಕೊಡಕ್ಯಾ ಗ್ರಾಮದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಿದ ನಂತರ ಸಿಂಗ್ ರಾಜ್‌ಗಢಕ್ಕೆ ತೆರಳುತ್ತಿದ್ದ ಸಮಯದಲ್ಲಿ ಜಿರಾಪುರ ಬಳಿಯ ವಿಜಯ್ ಕಾನ್ವೆಂಟ್ ಶಾಲೆಯ ಎದುರು ಬೈಕ್ ಸವಾರನೊಬ್ಬ ಕಪ್ಪು ಬಣ್ಣದ ಫಾರ್ಚುನರ್ ಎದುರು ಬಂದಿ ಪರಿಣಾಮ ಈ ಅಪಘಾತ ಸಂಭವಿಸಿದೆ.
ಕಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದರಿಂದ ಯುವಕ ಹಾರಿ ೧೦ ಅಡಿ ದೂರದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಘಟನೆಯ ನಂತರ ಕಾರಿನಲ್ಲಿ ಕುಳಿತಿದ್ದ ದಿಗ್ವಿಜಯ್ ಸಿಂಗ್ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವೈದ್ಯರು ಯುವಕನಿಗೆ ಪ್ರಥಮ ಚಿಕಿತ್ಸೆ ನೀಡಿ ಭೋಪಾಲ್ ಹೆಚ್ಚಿನ ಚಿಕಿತ್ಸೆಗೆ ಭೋಪಾಲ್‌ಗೆ ಕಳುಹಿಸಿದ್ದಾರೆ.
ಗಾಯಗೊಂಡ ಯುವಕ ೨೦ ವರ್ಷದ ರಾಂಬಾಬು ಬಗ್ರಿ, ಪಾರ್ವಲಿಯ ನಿವಾಸಿ ಎಂದು ಗುರುತಿಸಲಾಗಿದೆ. ದೇವರ ದಯೆಯಿಂದ ಯುವಕನಿಗೆ ಹೆಚ್ಚಿನ ಪೆಟ್ಟಾಗಿಲ್ಲ, ನೇರವಾಗಿ ಎದುರಿನಿಂದ ಬಂದ ಪರಿಣಾಮ ಈ ಘಟನೆ ನಡೆದಿದೆ. ಆತನ ಚಿಕಿತ್ಸೆ ವೆಚ್ಚ ತಾವೇ ಬರಿಸುವುದಾಗಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ವಾಹನವನ್ನು ಜಪ್ತಿ ಮಾಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸುವಂತೆ ದಿಗ್ವಿಜಯ್ ಸಿಂಗ್ ಅವರೇ ಪೊಲೀಸ್ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಾದ ನಂತರ ವಾಹನವನ್ನು ಜಿರಾಪುರ್ ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಯಿತು ಮತ್ತು ದಿಗ್ವಿಜಯ್ ಸಿಂಗ್ ರಾಜ್‌ಗಢ ಶಾಸಕರ ಕಾರಿನಲ್ಲಿ ರಾಜ್‌ಗಢಕ್ಕೆ ತೆರಳಿದರು ಎಂದು ಮೂಲಗಳು ತಿಳಿಸಿವೆ.