`ದಿಗ್ವಿಜಯ’ಕ್ಕೆ ಸೆನ್ಸಾರ್ ಮೆಚ್ಚುಗೆ

ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಸೇರಿ ಹಲವು ಚಿತ್ರ ನಿರ್ದೇಶಿಸಿರುವ  ದುರ್ಗಾ ಪಿ.ಎಸ್ ಆಕ್ಷನ್ ಕಟ್ ಹೇಳಿರುವ  ಮತ್ತೊಂದು ಚಿತ್ರ  “ದಿಗ್ವಿಜಯ”. ಸದ್ದು ಗದ್ದಲವಿಲ್ಲದೆ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್ ಕೂಡ ಆಗಿದೆ.

ಚಿತ್ರವನ್ನು ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ  ಚಿತ್ರಿಕರಣ ನಡೆಸಲಾಗಿದೆ. ಜಯಪ್ರಭು  ಲಿಂಗಾಯತ್ ಚಿತ್ರದ ನಾಯಕನಾಗಿ ನಟಿಸಿದ್ದು  ಸ್ನೇಹ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಒಬ್ಬ  ವರದಿಗಾರ ಮನಸು ಮಾಡಿದರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ  ಬಗೆಹರಿಸಬಹುದು ಎನ್ನುವುದನ್ನು  ಚಿತ್ರದಲ್ಲಿ ಹೇಳಲಾಗಿದೆ.  ವರದಿಗಾರನೊಬ್ಬ ಹುಚ್ಚನನ್ನು ಇಟ್ಟುಕೊಂಡು  ಕೇವಲ ಮೂರು ದಿನದಲ್ಲಿ  ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ  ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಈ ಚಿತ್ರದ ಕಥೆ.

ನಾಯಕನ ತಂದೆ ತಾಯಿ ಕೂಡ ರೈತರೇ ಆಗಿದ್ದು  ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ನಾಯಕನ ಗೆಳೆಯ ಹುಚ್ಚನಾಗುವ ಕಥಾಹಂದರ ಹೊಂದಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದ ಯು ಸರ್ಟಿಫಿಕೇಟ್ ನೀಡಿದೆ.

ಗೋವಾ ಚಿತ್ರೋತ್ಸವದಲ್ಲಿ   ಚಿತ್ರಕ್ಕೆ 2 ಪ್ರಶಸ್ರಿ ಬಂದಿದೆ. ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ  ಚಿತ್ರಕಗಕೆ  ಜಯಪ್ರಭು ಆರ್ ಲಿಂಗಾಯತ್. ಅರುಣ್ ಸುಕದರ್. ಹರೀಶ್ ಆರ್ ಸಿ.  ನಿರ್ಮಾಣ ಮಾಡಿದ್ದಾರೆ.

.ಚಿತ್ರದಲ್ಲಿ ಸುಚೇಂದ್ರ ಪ್ರಸಾದ್. ಪಟ್ರೆಬನಾಗರಾಜ್. ಹೊನ್ನವಳ್ಳಿ ಕೃಷ್ಣ. ಹೊನ್ನವಳ್ಳಿ ಶ್ರೀಕಾಂತ್. ಕಿಲ್ಲರ್ ವೆಂಕಟೇಶ್. ಶಿವಕುಮಾರ್ ಆರಾಧ್ಯ. ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ 4 ಫೈಟ್ 5 ಹಾಡುಗಳಿದ್ದು ಹರ್ಷ  ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ. ಸಾಹಸ – ಸೂಪ್ಪರ್ ಸುಬ್ಬು. ಡ್ಯಾನ್ಸ್ ಮಾಸ್ಟರ್ ಜಗ್ಗು ಅವರದು.