ದಿಗ್ಗೇವಾಡಿ: ಎರಡನೇ ಅವಧಿಗೆ:  ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ರಾಯಬಾಗ.ಜು.೨೬; ತಾಲ್ಲೂಕಿನ ಸುಕ್ಷೇತ್ರ ದಿಗ್ಗೇವಾಡಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷ  ಹಾಗೂ ಉಪಾಧ್ಯಕ್ಷರ ಎರಡನೇ ಅವಧಿಯ ಚುನಾವಣೆ ಅವಿರೋಧ ಆಯ್ಕೆ ಇತ್ತೀಚೆಗೆ ನಡೆಯಿತು.ಎರಡನೇ ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರವೀಂದ್ರ ರಾಮಚಂದ್ರ ಚೌಗಲೆ ಹಾಗೂ ‌ಉಪಾಧ್ಯಕ್ಷರಾಗಿ ಸುಗಂದಾ ರಮೇಶ ಐನಾಪೂರೆ ಅವರು ಆಯ್ಕೆಯಾದರು. ಚುನಾವಣೆಯ ಅಧಿಕಾರಿಯಾಗಿ ಹಿರಿಯ‌ ಸಹಾಯಕ ತೋಟಗಾರಿಕೆ ಜಿ.ಪಂ ನಿರ್ದೇಶಕರಾದ ಎಂ.ಎಸ್‌.ಹಿಂಡಿಹೊಳಿ ಅವರು ಕಾರ್ಯನಿರ್ವಹಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ರವೀಂದ್ರ ಚೌಗುಲೆ ಅವರು, ಎಲ್ಲರೂ ನನ್ನ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಹಾಗಾಗಿ ಉಪಾಧ್ಯಕ್ಷರ, ಸದಸ್ಯರ, ಗ್ರಾಮದ ಜನರ, ಅಭಿವೃದ್ಧಿ ಕಾಮಗಾರಿಗಳನ್ನು ಇನ್ನು ಮುಂದೆ ಅಧಿಕಾರಿಗಳ ವಿಶ್ವಾಸ ತೆಗೆದುಕೊಂಡು ಅಭಿವೃದ್ಧಿಗೆ ತೀವ್ರ ಕಾಳಜಿ ವಹಿಸುವೆ. ಎಂದು ಹೇಳಿದರು.ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಅಪ್ಪಾಸಾಹೇಬ ಮೈಶಾಳೆ, ಸುನೀತಾ ಪಾಟೀಲ, ಮಹಾಂತೇಶ ಚೌಗುಲೆ, ಧರೆಪ್ಪ ಮಿರ್ಜೆ, ಮಲ್ಲಪ್ಪ ಮೈಶಾಳೆ,  ಪ್ರವೀಣ ಚೌಗುಲೆ, ಪ್ರಕಾಶ ಮಿರ್ಜೆ,  ಶೇಖರ ಕಾಂಬಳೆ,  ಬಾಬು ಬಂಡಗರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಂಬಳೆ, ಬಾಳು ಜಮಾದಾರ, ಮಲಪ್ಪಾ ಐನಾಪುರೆ ಹಾಗೂ ಸತ್ಯಪ್ಪ ಐನಾಪುರೆ ಉಪಸ್ಥಿತರಿದ್ದರು