ದಿಗ್ಗಿ ಸರಳ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಣೆ

ಶಹಾಪುರ:ಡಿ.6:ತಾಲೂಕಿನ ದಿಗ್ಗಿ ಗ್ರಾಮದಲ್ಲಿ ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರವರ 65 ನೇ
ಮಹಾಪರಿನಿರ್ವಾಣ ದಿನವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು.

ಗ್ರಾಮದ ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಾಂತೇಶ ದೊಡ್ಡಮನಿ ಮಾತನಾಡಿ, ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತಿ ಎಂಬ ಮಹಾ ಪಿಡುಗಿನಿಂದ ಭಾರತದಲ್ಲಿ ಮಹಿಳೆಯರಿಗೆ ದಿನ ದಲಿತರಿಗೆ, ಸೌಲಭ್ಯ ಮತ್ತು ಹಕ್ಕುಗಳಿಂದ ವಂಚಿತರಿಗೆ ಸಂವಿಧಾನ ಮೂಲಕ ಸಮಾನ ಸ್ಥಾನ ಮಾನ ನೀಡಿ ಎಲ್ಲರಿಗೂ ನ್ಯಾಯ ವದಗಿಸಿದ ಮಹಾನ್ ಮಾನವತಾವಾದಿಯನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ದೇಶದ ಪ್ರತಿ ಪ್ರಜೆಗೂ ಸಾಮಾಜಿಕ, ಆರ್ಥಿಕ ಮತ್ತು ನ್ಯಾಯವನ್ನು ವದಗಿಸಿ, ವಿಚಾರ, ಅಭಿವ್ಯಕ್ತಿ, ನಂಬಿಕೆ,ಧರ್ಮ ಮತ್ತು ಉಪಾಸನೆಯ ಸ್ವಾತಂತ್ರ್ಯ ನೀಡಿ ಎಲ್ಲರಿಗೂ ಸಮಾನ ಅವಕಾಶಗಳನ್ನು ದೊರಕಿಸಿ, ವ್ಯಕ್ತಿ ಗೌರವ, ದೇಶದ ಏಕತೆ, ಸಮಗ್ರತೆಗಾಗಿ ಎಲ್ಲರಲ್ಲೂ ಭ್ರಾತೃತ್ವ ಭಾವನೆಯನ್ನು ಮೂಡಿಸಿದ ಅಂಬೇಡ್ಕರರಿಗೆ ಇಂದು ತಲೆ ಭಾಗಿ ನಮಸ್ಕರಿಸುತ್ತೇವೆ. ಆದರಿಂದ ಅವರ ತತ್ವ ಸಿದ್ದಾಂತಗಳನ್ನು ಜನತೆ ಚಾಚು ತಪ್ಪದೆ ಪಾಲಿಸಿ ಮುನ್ನಡೆಯಬೇಕು ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಸಂಗಣಬಸಪ್ಪ ಹಾದಿಮನಿ, ಗುರುಸಂಗಪ್ಪ ಪೂಜಾರಿ, ಮಹಾದೇವಪ್ಪ ಹಾಲಭಾವಿ, ದೇವಿಂದ್ರಪ್ಪ ಹಳಿಮನಿ, ಅಂಬ್ಲಪ್ಪ ಕೋಡ್ಡಿನ್, ಬೊಮ್ಮರೆಡ್ಡಿ ದೊಡ್ಡಮನಿ, ಅಂಬರೇಶ್ ಕಾಡಮಗೇರಿ, ಪ್ರಭುಲಿಂಗ ಏವೂರು, ಪ್ರಲ್ಹಾದ್ ಬಡಿಗೇರ,ಶ್ರೀಶೈಲ ದೊಡ್ಡಮನಿ, ಚನ್ನಬಸಪ್ಪ ದೊಡ್ಡಮನಿ, ಚನ್ನಬಸಪ್ಪ ಕಾಡಮಗೇರಿ, ಮೌನೇಶ್ ಹಳಿಪೇಠಿ, ಸಂಗಮೇಶ ಕೋಡ್ಡಿನ್, ಸಿದ್ದು ಮರಕಲ್ ಇದ್ದರು.