
ರಾಯಚೂರು,ಮಾ.೧೪- ನಗರ ಜಿಲ್ಲೆಯ ಹಿರಿಯ ಔಷಧ ಮಾರಾಟ ಪ್ರತಿನಿಧಿ, ರಂಗಕಲಾವಿದ ನರಗುಂದ ಬಂಡಾಯ ಚಲನ ಚಿತ್ರದ ನಿರ್ಮಾಪಕ (ಓಂಕಾರ್ ಫಿಲಂಸ್ ಸಿದ್ದೇಶ ವಿರಕ್ತಮಠ ಚೌಷಧ ಮಾರಾಟ ಪ್ರತಿನಿಧಿ (ಮೆಡಿಕಲ್ ರೆಪ್ರೆಜೆಂಟೇಟಿವ್ ಆಗಿ ೨೫ ನೇ ವರ್ಷ (ಬೆಳ್ಳಿ ಹಬ್ಬ ಆಚರಿಸುತ್ತಿರುವ ಪ್ರಯುಕ್ತ ನಗರದ ವಾಲ್‌ಕಟ್ ಮೈದಾನದಲ್ಲಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ದಿಗ್ಗಜರು ಅದ್ಧೂರಿ ಪ್ರದರ್ಶನ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿತು. ಅಷ್ಟೆಯಲ್ಲದೆ ರಾಯಚೂರಿನ ಇತಿಹಾಸದಲ್ಲಿ ಬೃಹತ್ ಹಾಗೂ ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮವೆಂದು ಹೆಸರು ಬರೆಸಿಕೊಂಡಿತು.
ಕಾರ್ಯಕ್ರಮದಲ್ಲಿ ಕಲಾವಿದರ ದಂಡೇ ಸೇರಿತ್ತು ಜ್ಯೂನಿಯರ್ ಕಲಾವಿದರುಗಳಾದ ಸೋನುನಿಗಮ್, ಅಮಿತಾಬ್ ಬಚ್ಚನ್, ವಿಷ್ಣುವರ್ಧನ್, ಉಪೇಂದ್ರ, ಅಂಬರೀಶ್, ಸುದೀಪ್ ಹಾಗೂ ಜ್ಯೂನಿಯರ್ ಪುನೀತ್ ರಾಜಕುಮಾರ, ಮಿಮಿಕ್ರಿ ಗೋಪಿ, ಶ್ರೀರಾಮ ಜಾದುಗಾರ್ ಹಾಗೂ ಪವಿತ್ರಾ, ರೂಪಶ್ರೀ ಮತ್ತು ಪಾರು ಹಾಗೂ ಸ್ಥಳಿಯ ಕಲಾವಿದರಿಂದ ವೈವಿದ್ಯಮಯವಾಗಿ ಮನರಂಜನೆ ನೀಡಿತು.
ಜ್ಯೂನಿಯರ್ ಸೋನುನಿಗಮ್ ಅವರ ಕ್ಯಾಹುವ ತೇರವಾದ ಇಂಪಾಗಿ ಮೂಡಿಬಂದು ಪ್ರೇಕ್ಷಕರನ್ನು ಮಂತ್ರಮುಗ್ಧನ್ನಾಗಿಸಿತು. ಜ್ಯೂನಿಯರ್ ಅಮಿತಾಬ್ ಅವರು ಕೈಕೆ ಪಾನ್ ಬನಾರಸ್ ವಾಲಾ ಹಾಡಿಗೆ ಜನರು ಅವರೊಂದಿಗೆ ಹೆಜ್ಜೆಹಾಕಿದರು. ಜೂನಿಯರ್ ಪುನೀತ್ ರಾಜಕುಮಾರ ರವರು ಹಲಾವರು ಹಾಡುಗಳಿಗೆ ಮಸ್ತಕಟ್ಟಾಗಿ ಕುಣಿದರು. ಜ್ಯೂ, ಸುದೀಪ್‌ರವರು ಚಿತ್ರನಾಟ ಸುದೀಪ್ ರಂತೆಯೆ ಡೈಲಾಗ್ ಹೇಳಿದರು. ಜ್ಯೂ, ಉಪೇಂದ್ರ ಪ್ರೀತ್ಸೆ ಪ್ರೀತ್ಸೆ ಎಂಬ ಹಾಡಿಗೆ ಅಚ್ಚುಕಟ್ಟಾಗಿ ಕುಣಿದರು. ಸಿದ್ದೇಶ ವಿರಕ್ತಮಠ ಹಾಗೂ ಪಾರು ಅವರು ಯಾಮಿನಿ ಹಾಡಿಗೆ ಮನಮೋಹಕವಾಗಿ ಸ್ಟೆಪ್ ಹಾಕಿದರು. ಶ್ರೀರಾಮ ಜಾದುಗಾರನ ಕೈಚಳಕ ನೋಡುಗರನ್ನು ನಿಬ್ಬೆರಗುಗೊಳಿಸಿತು. ದಿಗ್ಗಜರು ಚಿತ್ರದ ಕುಚಕು ಕುಚಿಕು ಹಾಡಿಗೆ ಜ್ಯೂ ಅಂಬರೇಶ್ ಹಾಗೂ ಜ್ಯೂ ವಿಷ್ಣುವರ್ದನ ರವರ ನಟನೆ ಅಸಂಖ್ಯಾತ ಜನರನ್ನು ತನ್ಮಯಗೊಳ್ಳುವಂತೆ ಮಾಡಿತು.
ಖ್ಯಾತ ಹಾಸ್ಯ ಕಲಾವಿದ ಮಿಮಿಕ್ರಿಗೋಪಿ ಚಲನ ಚಿತ್ರ ನಟದ ಹಾಗೂ ರಾಜಕಾರಣಿಗಳ ಧ್ವನಿಯನ್ನು ಅನುಕರಣೆ ಮಾಡಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಮಾಜಿ ಶಾಸಕರಾದ ಎ.ಪಾಪಾರೆಡ್ಡಿ ಯವರು ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮವನ್ನು ಉದ್ಭಟಿಸಿ ಸಿಲ್ವರ್ ಜುಬಿಲಿ ಮೆಡಿಕಲ್ ರೆಪ್ರೆಜೆಂಟೇಟಿವ್ ಸಿದ್ದೇಶ ವಿರಕ್ತಮಠದ ಕಲಾ ಜೀವನ ಹಾಗೂ ಉದ್ಯೋಗದ ಬದುಕನ್ನು ಬಣ್ಣಿಸಿ ರಾಯಚೂರು ಜನರ ಪರವಾಗಿ ಅಭಿನಂದಿಸಿದರು. ವೇದಿಕೆಯ ಮೇಲೆ ಸುಭಾಶ್‌ಚಂದ್ರ ಸಾಂಬಾಜಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಕಿಲಿಲಿಂಗಪ್ಪ ಕವಿತಾಳ್, ಮುಂಡ್ಲ ರಾಜೇಂದ್ರ ರೆಡ್ಡಿ, ಪ್ರಭು ಶಾಸ್ತ್ರಿ, ಪಿ. ಕೃಷ್ಣಮೂರ್ತಿ ವಕೀಲರು, ಸತ್ಯನಾತ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಆಸೀನರಾಗಿದ್ದರು. ತಮ್ಮ ಸಾಧನೆಗೆ ರಾಯಚೂಲಿನ ಜನತೆಯ ಆಶಿರ್ವಾದವೆ ಕಾರಣವೆಂದು ಸಿದ್ದೇಶ್ ಗು. ವಿರಕ್ತಮಠ ರವರು ಹೇಳಿದರು. ಇದೇ ಸಂದರ್ಭದಲ್ಲಿ ಖ್ಯಾತ ವೈದ್ಯರುಗಳಾದ ಸಿಂಧನೂರಿಲಿನ ಡಾ.ಬಿ.ಎನ್. ಪಾಟೀಲ್, ಡಾ.ಸಂದೀಪ್ ಪಾಟೀಲ್ ರವರಿಗೆ ವೈದ್ಯರತ್ನ ಹಾಗೂ ಡಾ.ಕಲ್ಲಪ್ಪ ಹೆರಕಲ್‌ರವರಿಗೆ ವೈದ್ಯನಿಧಿ ಪ್ರಶಸ್ತಿ ನೀಡಿ ಗೌರವಿಸಿದರೆ ಸುರೇಂದ್ರ ಕುಮಾರ ಅಬಕಾರಿ ಹಾಗೂ ಕೆ. ಗೋವಿಂದ ರೆಡ್ಡಿ ಸರ್ಜಪುರ ರವರಿಗೆ ಎಸ್.ಪಿ. ಬಾಲಸುಬ್ರಮಣ್ಯಂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಿವೃತ್ತ ವಾಹನ ನಿರೀಕ್ಷಕರಾದ ವೆಂಕಟೇಶ್ವರ ರಾವ್ ಅವರಿಗೆ ಹಾಗೂ ಮಲ್ಲಿಕಾರ್ಜುನ ಪಾಟೀಲ್ ಯದ್ಧಲ ದೊಡ್ಡಿ ಅವರಿಗೆ ಹೃದಯವಂತೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಿ. ಕೃಷ್ಣಮೂರ್ತಿ ಅವರಿಗೆ ನ್ಯಾಯವಂತ ಪ್ರಶಸ್ತಿ ನಿವೃತ್ತ ಡಿ.ವೈ.ಎಸ್.ಪಿ. ರಮೇಶ್ ಮೇಟಿ ರವರಿಗೆ ಆಪ್ತ ರಕ್ಷಕ ಶ್ರೀಮತಿ ರೂಪಾ ಶ್ರೀನಿವಾಸ ನಾಯಕ ರವರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಡಾ. ಜೆ.ಎಂ. ಶರಣಯ್ಯ ಸ್ವಾಮಿ ಇವರ ಸರ್.ಎಂ.ವಿಶ್ವೇಶ್ವರಯ್ಯ ಶಿಕ್ಷಣ ಸಂಸ್ಥೆಗೆ ಉತ್ತಮ ಶಿಕ್ಷಣ ಸಂಸ್ಥೆ ಎಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮವನ್ನು ಮುರಳೀಧರ ಕುಲಕರ್ಣಿ ನಿರೂಪಿಸಿದರು.