
ಚನ್ನಮ್ಮನ ಕಿತ್ತೂರ,ಅ 28: ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣದ ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಿಂದ ಕಾರ್ತಿಕ ವಾರೀ ನಿಮಿತ್ತ ಶ್ರೀ ಕ್ಷೇತ್ರ ಪಂಡರಪುರಕ್ಕೆ 79 ನೇ ದಿಂಡೀ ಪಾದಯಾತ್ರೆ ನವಂಬರ 03 ರಿಂದ ಪ್ರಾರಂಭವಾಗಿ ಹೊಳೆಹೊಸೂರು, ಯರಡಾಲ, ಬೈಲವಾಡ, ಮುರಕಿಭಾವಿ, ಮಲ್ಲಾಪುರ, ನೇಸರಗಿ, ಬೆನಚಮರ್ಡಿ, ಅರಭಾವಿ, ಕಬ್ಬೂರ, ಚಿಕ್ಕೋಡಿ ಮಾಂಜರಿ, ಖೋತವಾಡಿ ಮಾರ್ಗವಾಗಿ ನವಂಬರ 22 ರಂದು ಪಂಡರಾಪುರ ತಲುಪುವುದು.
ನವಂಬರ 27 ರ ವರೆಗೆ ದಿಂಡೀ ಅಲ್ಲಿಯೇ ತಂಗಿ ಪಂಡರೀನಾಥನ ಸೇವೆ ಸಲ್ಲಿಸಿ ಮರಳಲಿದೆ. ಇದರ ನೇತೃತ್ವವನ್ನು ಹ.ಬ.ಪ ಗಂಗಾಧರ ಹುಣಶೀಕಟ್ಟಿ ಮಹಾರಾಜರು ವಹಿಸಲಿದ್ದಾರೆ. ಪಾದಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ದಿನಬಳಕೆ ಸಾಮಗ್ರಿ ಸಾಗಿಸಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಈ ದಿಂಡೀಯಲ್ಲಿ ಭಾಗವಹಿಸುವರು ಹ.ಬ.ಪ ಜ್ಞಾನೇಶ್ವರ ಹುಣಶೀಕಟ್ಟಿ ಮಹಾರಾಜರನ್ನು ನಂ. 9945413542 ಗೆ ಸಂಪರ್ಕಿಸಿ.