ದಿಂಗಾಲೇಶ್ವರ ಶ್ರೀಗಳ ಹಿಂದೆ   ಕಾಣದ ಕೈಗಳು: ಅರವಿಂದ ಬೆಲ್ಲದ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.14: ಧಾರವಾಡ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾಗಿರುವ ದಿಂಗಾಲೇಶ್ವರ ಶ್ರೀಗಳ ಹಿಂದೆ  ಹಿಂದೆ ಕಾಣದ ಕೈಗಳ ಚಳಕ ಇದೆ. ನಾನು ಅದೇ ಕ್ಷೇತ್ರದ ಬಂದಿರುವೆ.ದಿಂಗಾಲೇಶ್ವರ ಶ್ರೀಗಳ ಸ್ಪರ್ಧೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ಗೆಲುವಿನ ಮೇಲೆ ಪರಿಣಾಮ  ಬೀರಲ್ಲ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಅವರು ಇಂದು ನಗರದ ಖಾಸಗಿ ಹೊಟೆಲ್ ನಲ್ಲಿ ಬಿಜೆಪಿ ಅಭ್ಯರ್ಥಿ ಪರ ವೈಧ್ಯರುಗಳ ಸಭೆ ಯಲ್ಲಿ ಪಾಲ್ಗೊಳ್ಳು ಬಂದಾಗ ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಲಕ ಜೊತೆ ಮಾತನಾಡಿದರು.
ಮಲಗಿದವರನ್ನು ಎಬ್ಬಿಸಬಹುದು ಮಲಗಿದ ಹಾಗೇ ನಟನೆ ಮಾಡಿದ್ರೆ ಎಬ್ಬಿಸುವುದು ಕಷ್ಟ. ನಿಜವಾದ ಸಮಸ್ಯೆ ಇದ್ರೆ ಮಾತನಾಡಿ ಬಗೆಹರಿಸಿ ಮನವೊಲಿಸುವ ಕೆಲಸ ಮಾಡಬಹುದು. ಆದರೆ ಶ್ರೀಗಳ ಸ್ಪರ್ಧೆ ಹಿಂದೆ ಬೇರೆ ಶಕ್ತಿಗಳ ಕೆಲಸ ಮಾಡ್ತಿದೆ. ಹೀಗಾಗಿ ಮನವೊಲಿಸುವ ಪ್ರಯತ್ನ ಮಾಡಲ್ಲ, ಅವಶ್ಯಕತೆ ಇಲ್ಲ.ಸ್ಪರ್ಧೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅಂತಾ ಅನಿಸುತ್ತದೆಂದರು.
ಈಶ್ವರಪ್ಪ ಸ್ಪರ್ಧೆ ವಿಚಾರ:
ಈಶ್ವರಪ್ಪ ಅವರು ಬಿಜೆಪಿ ಮತ್ತು ಸಂಘದ‌ ನಿಷ್ಠಾವಂತ ಕಾರ್ಯಕರ್ತರು ನಾಮಪತ್ರ ಹಿಂಪಡೆಯುವ ವಿಶ್ವಾಸವಿದೆ ಎಂದ ಅವರು ಕಾಂಗ್ರೆಸ್ ಫಾಲ್ಸ್ ಗ್ಯಾರಂಟಿ ವರ್ಕೌಟ್ ಆಗಲ್ಲ.10 ಕಿಲೋ ಅಕ್ಕಿ ಕೊಡ್ತಿವಿ ಅಂದ್ರೂ ಕೊಟ್ಟಿಲ್ಲ. ಮೋದಿಯವರೇ 5 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಮೋದಿನೇ ಮೂರನೇ ಬಾರಿ ಪ್ರಧಾನಿ ಎಂದು ಜನರು ನಿರ್ಧಾರ ಮಾಡಿದ್ದಾರೆ. ದೇಶದಲ್ಲಿ ಇರುವುದು ಮಾತ್ರ ಮೋದಿ ಗ್ಯಾರಂಟಿ ಎಂದರು. ನಿರಾಣಿ ಹೇಳಿಕೆ ವಿಚಾರ: ಪಂಚಮಸಾಲಿ ವಿಷಯ ಕುರಿತು  ಮಾತನಾಡಿರುವ
ಮುರುಗೇಶ್ ನಿರಾಣಿ ನಮ್ಮ ಪಕ್ಷದರು. ಸಂಜೆಯ ಪಾಟೀಲ್ ಹೇಳಿಕೆ ಬಗ್ಗೆ ನಾತನಾಡೋ ಅವಶ್ಯಕತೆ ಇಲ್ಲ ಎಂದರು. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಬಳ್ಳಾರಿಯಲ್ಲಿ ರಾಮುಲು ಜನಪ್ರಿಯತೆ , ಜನಾರ್ದನ ರೆಡ್ಡಿ ಶಕ್ತಿಯಿದೆ. ಸೂರ್ಯ ಉದಯಿಸುವುದು ಎಷ್ಟು ಸತ್ಯವೋ, ಬಳ್ಳಾರಿಯಲ್ಲಿ‌ ರಾಮುಲು ಗೆಲವು ಅಷ್ಟೆ ಸತ್ಯ ಎಂದರು.