ದಿಂಗಾಲೇಶ್ವರ ಶ್ರೀಗಳ ದರ್ಶನ ಪಡೆದ ಡಿಕೆಶಿ


ಗದಗ,ಡಿ.18- ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಈ ಭಾಗದ ಜನತೆಗೆ ಶಾಂತಿ ಸೌಹಾರ್ದತೆಯನ್ನು ಮೂಡಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಲಕ್ಷೇಶ್ವರ ತಾಲೂಕಿನ ಬಾಲೇಹೊಸೂರು ಗ್ರಾಮದ ಬಾಲೇಹೊಸೂರು ಮಠಕ್ಕೆ ಭೇಟಿ ನೀಡಿ ಶ್ರೀ ದಿಂಗಾಲೇಶ್ವರ ಸ್ವಾಮಿಗಳ ದರ್ಶನಾಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಶ್ರೀಗಳು ತಮ್ಮ ಅಪಾರ ಜ್ಞಾನದ ಮೂಲಕ ಈ ಭಾಗದ
ಜನತೆಯಲ್ಲಿ ಶಾಂತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಧನ್ಯ ಮಠಾಧೀಶರ ಭೇಟಿ ಮಾಡಬೇಕೆಂದು ಬಹಳ ದಿನಗಳಿಂದ ಕಾತರನಾಗಿದ್ದೆ. ಇಂದು ಅವರನ್ನು ಭೇಟಿ ಮಾಡುವ ಸುದೈವÀಕಾಶ ಸಿಕ್ಕಿದೆ. ಅವರ ಆಶೀರ್ವಾದ, ಮಾರ್ಗದರ್ಶನ ಪಡೆದಿದ್ದೇನೆ ಎಂದರು.
ಇಲ್ಲಿಗೆ ಭೇಟಿ ನೀಡಲು ಮುಖ್ಯ ಕಾರಣವೇನೆಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ಎಲ್ಲಿ ಶಕ್ತಿ ಇದೆಯೋ ಅಲ್ಲಿಗೆ ಹೋಗುತ್ತೇನೆ.
ಇಲ್ಲಿಯೂ ಅಪಾರವಾದ ಶಕ್ತಿ, ಜ್ಞಾನ ಬಂಡಾರ, ಸಂಸ್ಕøತಿ ಇದೆ. ಶ್ರೀಗಳು ಮಾರ್ಗದರ್ಶಕರಾಗಿದ್ದು, ಅವರನ್ನು ಭೇಟಿ ಮಾಡಿ ಧನ್ಯವಾಗಬೇಕೆಂದು
ಆಗಮಿಸಿದ್ದೇನೆ ಎಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಮಾಜಿ ಸಚಿವ ರುದ್ರಪ್ಪ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಯುವ ಮುಖಂಡ ಆನಂದ ಗಡ್ಡದ್ದೇವರಮಠ, ರಾಜೀವ ಕುಂಟಿ, ಯು.ಎಸ್. ಹೊಳಲಾಪುರ, ಹುಮಾಯೂನ್ ಮಾಗಡಿ, ಸೋಮು ಬೆಟಗೇರಿ, ರಾಮು ಗಡದವರ, ಜಿ.ಆರ್.ಕೊಪ್ಪದ, ನಿಂಗಪ್ಪ ಜಾಲವಾಡಗಿ, ಫಕ್ಕೀರೇಶ್, ಮ್ಯಾಟಣ್ಣವರ ,ಜಿ.ಪಂ. ಮಾಜಿ ಅಧ್ಯಕ್ಷ ಸುಜಾತಾ ದೊಡ್ಡಮನಿ, ಷಣ್ಮುಖ ಶಿವಳ್ಳಿ, ದೇವು ಲಮಾಣಿ, ಮಂಜುನಾಥ ಘಂಟಿ, ಎಸ್. ಹವಾಲ್ದಾರ, ಯಲ್ಲಪ್ಪ ಸೂರಣಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.