ದಾಸ ಸಾಹಿತ್ಯ ಸಮ್ಮೇಳನದ ಭಿತ್ತಿ ಪತ್ರಗಳು ಬಿಡುಗಡೆ

ಬೀದರ್ : ಡಿ.29:ಡಿಸೆಂಬರ್ 30ರಂದು ನಡೆಯಲಿರುವ ಜಿಲ್ಲಾ ಪ್ರಥಮ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಮನವಿ ಮಾಡಿದರು.
ಬೀದರ್ ನಗರದಲ್ಲಿ ದಾಸ ಸಾಹಿತ್ಯ ಸಮ್ಮೇಳನದ ಪ್ರಚಾರಾರ್ಥ ಭಿತ್ತಿ ಪತ್ರಗಳು ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಥಮ ಬಾರಿಗೆ ದಾಸ ಸಾಹಿತ್ಯ ಸಮ್ಮೇಳನ ಮಾಡುತ್ತಿರುವುದು ಸಾಹಿತ್ಯ ಪರಂಪರೆ ದೃಷ್ಟಿಯಿಂದ ಮಹತ್ತರ ಕಾರ್ಯವಾಗಿದೆ ಎಂದರು.
ಪತ್ರಿಕಾ ಸಂಪಾದಕ ಮಾಳಪ್ಪ ಅಡಸಾರೆ ಮಾತನಾಡಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಶೇಷ ಕಾಣಿಕೆ ನೀಡಿದ ದಾಸ ಸಾಹಿತ್ಯ ಪ್ರಸ್ತುತ ಅತ್ಯವಶ್ಯಕವಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಈ ಸಮ್ಮೇಳನ ಹೊಸ ಭಾಷ್ಯ ಬರೆಯಲಿದೆ ಎಂದರು.
ಹಿರಿಯ ಮುಖಂಡ ಪಂಡಿತರಾವ ಚಿದ್ರಿ, ಕಸಾಪ ಗೌರವ ಕಾರ್ಯದರ್ಶಿ ಟಿ.ಎಂ ಮಚ್ಚೆ, ಎಂಎಸ್ ಮನೋಹರ್ ಮಾಜಿ ಜಿಪಂ ಸದಸ್ಯ ಬಾಬುರಾವ ಮಲ್ಕಾಪೂರೆ, ಗೀತಾ ಚಿದ್ರಿ, ಮಲ್ಲಿಕಾರ್ಜುನ ಬಿರಾದಾರ್, ಸಂತೋಷ ಜೋಳದಾಪಕೆ ಮಾತನಾಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಮೇತ್ರೆ, ಲೋಕೆಶ ಮರ್ಜಾಪೂರ್, ಸಂತೋಷ ಬಗದಲ್, ವಿಜಯಕುಮಾರ ಬ್ಯಾಲಳ್ಳಿ, ತುಕಾರಾಮ ರಾಜನಾಳೆ ಸೇರಿದಂತೆ ಇನ್ನಿತರರಿದ್ದರು.