ದಾಸ ಸಂಸ್ಕøತಿಯನ್ನು ಶ್ರಿಮಂತಗೊಳಿಸಿದವರು ಕನಕದಾಸರು

ಧಾರವಾಡ, ನ24: ಕನಕದಾಸರು ಮಾನವಕುಲದ ಉದ್ದಾರಕ್ಕಾಗಿಯೇ ಕೀರ್ತನೆಗಳನ್ನು ರಚಿಸಿದ್ದು, ಜಾತಿ, ಮತ, ಭೇಧ-ಭಾವ, ಮೇಲು-ಕೀಳೂ ಹಾಗೂ ನಾನು ಎಂಬುದನ್ನು ಬಿಟ್ಟಾಗಲೆ ನಮಗೆ ಮುಕ್ತಿ ದೊರೆಯುವುದು. ವಿನಾಕಾರಣ ಪರರನ್ನು ನಿಂದಿಸುವುದು, ದೂಷಿಸುವುದು, ಕೆಟ್ಟದನ್ನು ಮಾಡುವುದರಿಂದ ಯಾವ ಪ್ರಯೋಜನವು ಇಲ್ಲ ಎಂಬ ಯುಕ್ತಿಯನ್ನು ಅವರ ಬರೆದ ಕೀರ್ತನೆಗಳು ಸಾರುತ್ತವೆ ಎಂದು ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಹೇಳಿದರು.
ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಅವರು ಮಾತನಾಡಿದರು. ಈ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಜೆ.ಎಸ್.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಜಿನದತ್ತ ಹಡಗಲಿಯವರು ಉಪನ್ಯಾವನ್ನು ನೀಡುತ್ತ, 16ನೇ ಶತಮಾನದಲ್ಲಿ ಪುರಂದರದಾಸರು ಹಾಗೂ ಕನಕದಾಸರು ಇಬ್ಬರೂ ಸಮಕಾಲಿನರು. ಇವರನ್ನು ದಾಸಪಂಥÀದ ಅಶ್ವಿನಿ ದೇವತೆಗಳೆÉಂದೇ ಕರೆಯುವ ವಾಡಿಕೆ ಇದೆ. ಕನಕದಾಸರು ಕೀರ್ತನೆಗಳ ಜೊತೆಗೆ ಮೊಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತೆಗಳಂತಹ ಕಾವ್ಯಗಳನ್ನು ರಚಿಸಿದ್ದಾರೆÀ. ಪತ್ನಿ ವಿಯೋಗದೊಂದಿಗೆ ಯುದ್ಧದಲ್ಲಿ ಸೋಲು, ಅದರಲ್ಲಿ ಆದ ಸಾವು ನೋವುಗಳ ಕನಕದಾಸರಿಗೆ ಜೀವನದಲ್ಲಿ ಜಿಗುಪ್ಸೆ ಉಂಟುಮಾಡಿ ವೈರಾಗ್ಯ ಪರವಶರಾದರು. ವ್ಯಾಸರಾಯರ ಶಿಷ್ಯರಾಗಿ ಪಾಂಡಿತ್ಯವನ್ನು ಪಡೆದು ಕನಕದಾಸರಾಗಿ ಹೊರಹೊಮ್ಮಿದರು.
ಈ ಸಂದರ್ಭದಲ್ಲಿ ಜಿನೇಂದ್ರ ಕುಂದಗೋಳ ಕಾರ್ಯಕ್ರಮ ನಿರೂಪಿಸಿದರು. ವಿವೇಕ ಲಕ್ಷ್ಮೇಶ್ವರ ವಂದಿಸಿದರು. ಸೂರಜ್ ಜೈನ್ ಹಾಗೂ ಜೆ.ಎಸ್.ಎಸ್ ನ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.