ದಾಸೋಹ ಸಮಿತಿ ರಾಜ್ಯಾದ್ಯಕ್ಷರಾಗಿ ಪ್ರಕಾಶಪಾಟೀಲ್ ಆಯ್ಕೆ

ದಾವಣಗೆರೆ. ಫೆ.19:  ಹರಿಹರದ ಶ್ರೀ ಪೀಠದಲ್ಲಿ  ಜಗದ್ಗುರು ವಚನಾನಂದ ಶ್ರೀಗಳು, ಟ್ರಸ್ಟ್ ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಕಾರ್ಯದರ್ಶಿ ಜ್ಯೋತಿಪ್ರಕಾಶ್ ಸಂಘದ ರಾಜ್ಯಾದ್ಯಕ್ಷ ಜಿ.ಪಿ.ಪಾಟೀಲ್ ಹಾಗೂ ಶ್ರೀಪೀಠದ ಟ್ರಸ್ಟ್ ನ ಇತರೆ ಸದಸ್ಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶ್ರೀ ಪೀಠದ ನಿತ್ಯದಾಸೋಹ ಹಾಗೂ ಪೀಠದ ಅಭಿವೃದ್ಧಿಗಾಗಿ ಕಾರ್ಯ ನರ್ವಹಿಸಲು ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ದಾಸೋಹ ಸಮಿತಿ ರಾಜ್ಯಾದ್ಯಕ್ಷರಾಗಿ ವಕೀಲರಾದ ಪ್ರಕಾಶ ಪಾಟೀಲ್ ಅವರನ್ನು ನೇಮಿಸಲಾಗಿದೆ ಎಂದು ಶ್ರೀಪೀಠದ ಆಡಳಿತಾಧಿಕಾರಿ ಡಾ.ರಾಜ್ ಕುಮಾರ್ ತಿಳಿಸಿದ್ದಾರೆ.