ದಾಸೋಹ ಸಮಿತಿಯಿಂದ ಉಚಿತ ಸಾರಿಗೆ ವ್ಯವಸ್ಥೆ

ಬೆಂಗಳೂರುಏ.೭: ಕೆ.ಎಸ್.ಆರ್.ಟಿ.ಸಿ ಮತ್ತು ಬಿಎಂಟಿಸಿ ಬಸ್ ಮುಷ್ಕರದಿಂದ ಮಧ್ಯಮವರ್ಗದವರಿಗೆ, ಬಡವರಿಗೆ,ಕೂಲಿ ಕಾರ್ಮಿಕರಿಗೆ,ರೋಗಿಗಳಿಗೆ,ತುರ್ತು ಕೆಲಸ ಇರುವ ನಾಗರೀಕರಿಗೆ,ಶಾಲಾ ಕಾಲೇಜು ಮಕ್ಕಳಿಗೆ,ನಿತ್ಯ ಕನ್ನಲ್ಲಿ ವೀರಭದ್ರಸ್ವಾಮಿ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಎರಡು ಟೆಂಪೋ ಟ್ರಾವೆಲರ್,೨೫ ಆಟೋಗಳನ್ನು ಉಚಿತವಾಗಿ ಓಡಿಸಲಾಗುತ್ತಿದೆ.
ಕನ್ನಲ್ಲಿಯಿಂದ ಕೊಡಿಗೇಹಳ್ಳಿ,ದೊಡ್ಡಗೊಲ್ಲರಹಟ್ಟಿ,ಬ್ಯಾಡರಹಳ್ಳಿ,ಸುಂಕದಕಟ್ಟೆ,ಕರ್ನಾಟಕ ಹೌಸಿಂಗ್ ಬೋರ್ಡ್ , ಟೋಲ್ ಗೇಟ್ ವರೆಗೆ ನಿರಂತರವಾಗಿ ಪ್ರಯಾಣಿಕರಿಗೆ ಉಚಿತವಾಗಿ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ಅಧ್ಯಕ್ಷ ಡಾ.ಎಸ್.ಶಾಂತರಾಜ್ ಉಚಿತ ವಾಹನ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿ ನಿತ್ಯಾನ್ನ ದಾಸೋಹ ಸೇವಾ ಸಮಿತಿ ವತಿಯಿಂದ ಉಚಿತ ವಾಹನ ಕಲ್ಪಿಸಲಾಗಿದ್ದು ಬಸ್ ಮುಷ್ಕರ ನಿಲ್ಲುವವರೆಗೂ ಉಚಿತ ವಾಹನವನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಓಡಿಸಲಾಗುವುದು ಎಂದರು.
ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ತೀರ್ಮಾನಿಸಿ ಬಸ್ ಮುಷ್ಕರದಿಂದ ನಾಗರೀಕರಿಗೆ ತೊಂದರೆಯಾಗಬಾರದೆಂದು ಉಚಿತ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಲ್ಲಿ ವೀರಶೈವ ನಿತ್ಯಾನ್ನ ದಾಸೋಹ ಸೇವಾ ಸಮಿತಿ ಉಪಾಧ್ಯಕ್ಷರಾದ ಎಂ.ಜಯಣ್ಣ,ಕೆ.ಎಸ್.ಷಣ್ಮುಗಾನಂದ,ಕಾರ್ಯದರ್ಶಿ ಸಿದ್ದಲಿಂಗಾಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಂ.ಶಾಂತಪ್ಪ,ಪರಮೇಶ್ ಮತ್ತು ಆಡಳಿತ ಮಂಡಳಿ ಸದಸ್ಯರು ಇದ್ದರು.