ದಾಸೋಹದ ಪರಿಕಲ್ಪನೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ:ಕುಂಟೋಜಿಶ್ರೀ

ತಾಳಿಕೋಟೆ:ಜ.18: ದಾಸೋಹ ಎಂಬುದಕ್ಕೆ ಅಘಾದವಾದ ಶಕ್ತಿ ಅಡಗಿದೆ ಆ ದಾಸೋಹದ ಪರಿಕಲ್ಪನೆ ಜನರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ಇದೇ ಜನೇವರಿ 21ರಂದು ವಿಶ್ವ ದಾಸೋಹ ದಿನವೆಂದು ಆಚರಿಸಲಾಗುತ್ತಿದ್ದು ಈ ನಿಟ್ಟಿನಲ್ಲಿ ಅಂದು ತಾಳಿಕೋಟೆಯ ವಿಠ್ಠಲ ಮಂದಿರದ ಮುಂದುಗಡೆ ಎಲ್ಲ ಮಠಾಧೀಶರ ಸಮ್ಮುಖದಲ್ಲಿ ದಾಸೋಹ ಸೇವೆ ನಡೆಯಲಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಕುಂಟೋಜಿ ಹಿರೇಮಠದ ಶ್ರೀ ಚನ್ನವೀರ ದೇವರು ಹೇಳಿದರು.

ಸೋಮವಾರರಂದು ಪಟ್ಟಣದ ಶ್ರೀ ವಿಠ್ಠಲ ಮಂದಿರದಲ್ಲಿ ಕರೆಯಲಾದ ದಾಸೋಹ ಸೇವೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ತ್ರಿವಿದ ದಾಸೋಹಿ ಶತಾಯುಷಿ ಸಿದ್ದಗಂಗಾ ಮಠದ ಶ್ರೀಶ್ರೀಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸ್ಮರಣೋತ್ಸವ ಅಂಗವಾಗಿ ಶ್ರೀ ಕುಮಾರೇಶ್ವರ ಜೀವನ ವಿಕಾಸ ಪೌಂಡೇಶನ್ ಹಾಗೂ ಅಸ್ಕಿ ಪೌಂಡೇಶನ್ ಇವರ ಸಹಹಯೋಗದಲ್ಲಿ ನಡೆಸಲು ಇಚ್ಚಿಸಲಾಗಿದೆ ಈಗಾಗಲೇ ದಾಸೋಹ ವ್ಯವಸ್ಥೆ ಕುರಿತು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರನ್ನು ಸಂಪರ್ಕಿಸಿದಾಗ ಅಂದು ನಡೆಯುವ ದಾಸೋಹದ ಸಂಪೂರ್ಣವಾದ ಜವಾಬ್ದಾರಿಯನ್ನು ನಮ್ಮ ಅಸ್ಕಿ ಪೌಂಡೇಶನ್ ನೇತೃತ್ವದಲ್ಲಿ ವಹಿಸಿಕೊಳ್ಳುವದಾಗಿ ಒಪ್ಪಿಕೊಂಡಿದ್ದಾರೆ ಅವರಿಗೆ ತಾಳಿಕೋಟೆ ನಾಗರಿಕರ ಪರವಾಗಿ ಮತ್ತು ಎಲ್ಲ ಶ್ರೀಗಳ ಪರವಾಗಿ ಅಭಿನಂದಿಸುತ್ತೇನೆಂದ ಅವರು ಅಂದು ವಿಠ್ಠಲ ಮಂದಿರದ ಮುಂದುಗಡೆ ನಡೆಯಲಿರುವ ದಾಸೋಹ ಸೇವೆಗೆ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಹಾಗೂ ನಾಗರಿಕರು ಸಹಕರಿಸಿ ದಾಸೋಹ ಸೇವೆಯನ್ನು ಯಶಸ್ವಿಗೊಳಿಸಬೇಕೆಂದ ಅವರು ಅಂದು ನಡೆಯಲಿರುವ ಈ ಸೇವೆಯಲ್ಲಿ ಸುಮಾರು 25 ಕ್ಕೂ ಅಧಿಕ ಮಠಾಧೀಶರುಗಳು ಪಾಲ್ಗೊಳ್ಳಲಿದ್ದಾರೆ ಬಸವೇಶ್ವರ ವೃತ್ತದಿಂದ ಬೆಳಿಗ್ಗೆ 9 ಗಂಟೆಗೆ ಮೇರವಣಿಗೆಯ ಮೂಲಕ ವಿಠ್ಠಲ ಮಂದಿರದ ವರೆಗೆ ಆಗಮಿಸಿ ದಾಸೋಹ ಸೇವೆಗೆ ಚಾಲನೆ ನೀಡಲಾಗುವುದು ಆಗಮಿಸುವ ಶ್ರೀಗಳಿಗೆ ದಾಸೋಹ ವ್ಯವಸ್ಥೆಯನ್ನು ಮದರಕಲ್ಲ ಕುಟುಂಭ ಪರಿವಾರದವರು ಹೊತ್ತುಕೊಂಡಿದ್ದಾರೆಂದರು.

ಕೊಡೇಕಲ್ಲ ದುರದುಂಡೇಶ್ವರ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ದಾಸೋಹ ಎಂಬುದು ನಿನ್ನೇ ಮೊನ್ನೇಯದಲ್ಲಾ ತೆಲೆ ತಲಾಂತರದಿಂದ ಬಂದಿದ್ದಾಗಿದೆ ಈ ನಮ್ಮ ನಾಡಿಗೆ ಶರಣರು ಸಂತರು ಸಾರಿಹೋದಂತಹ ದಾಸೋಹ ಪರಿಕಲ್ಪನೆ ಕೇವಲ ಮಠ ಮಾನ್ಯಗಳಲ್ಲಿ ನಡೆಯುತ್ತಿದೆ ಈ ದಾಸೋಹ ಸೇವೆ ಸಮಾಜದಲ್ಲಿಯೂ ನಡೆಯಬೇಕಿದೆ ಈ ಪರಿಕಲ್ಪನೆ ಮರಿ ಮಾಚಬಾರದೆಂಬ ಉದ್ದೇಶದಿಂದ ಜನೇವರಿ 21 ರಂದು ವಿಶ್ವ ದಾಸೋಹ ದಿನವೆಂದು ಆಚರಿಸಲಾಗುತ್ತಿದೆ ಅಂದು ತಾಳಿಕೋಟೆಯಲ್ಲಿ ದಾಸೋಹ ವ್ಯವಸ್ಥೆಯ ಚಿಂತನೆಯನ್ನು ಕುಟೋಜಿಶ್ರೀಗಳು ಒಳಗೊಂಡು ಎಲ್ಲ ಶ್ರೀಗಳು ಮಾಡಿದಾಗ ಅಸ್ಕಿ ಪೌಂಡೇಶನ್ ಅಧ್ಯಕ್ಷರು ದಾಸೋಹದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಅದರ ಜೊತೆಗೆ ಶ್ರೀಗಳ ದಾಸೋಹಕ್ಕೆ ಮದರಕಲ್ಲ ಕುಟುಂಭ ಹೊತ್ತುಕೊಂಡಿದೆ ಈ ದಾಸೋಹ ಸೇವೆ ಯಶಸ್ವಿಯಾಗಬೇಕಾದರೆ ಪಟ್ಟಣದ ಎಲ್ಲ ಸಂಘ ಸಂಸ್ಥೆಗಳ ಮುಖಂಡರ ಸಹಕಾರವೆಂಬುದು ಬಹಳೇ ಮುಖ್ಯವಾಗಿದ್ದು ಎಲ್ಲರು ಸಹಕರಿಸಬೇಕೆಂದರು.

ಇನ್ನೋರ್ವ ಜಂಗಮ ಸಮಾಜದ ಗೌರವಾಧ್ಯಕ್ಷರಾದ ಚಬನೂರಿನ ಜ್ಯೋತಿಷ್ಯ ರತ್ನ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ದಾಸೋಹವೆಂಬುದನ್ನು ನಾಡಿಗೆ ಪರಿಚಯಿಸಿಕೊಟ್ಟಿದ್ದು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮಿಗಳು ಹಾಗೂ ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳಾಗಿದ್ದಾರೆ ಅವರ ಸ್ಮರಣೆಯೊಂದಿಗೆ ಇದೇ ದಿ. 21 ರಂದು ತಾಳಿಕೋಟೆಯಲ್ಲಿ ನಡೆಯುವ ದಾಸೋಹ ಸೇವೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣವೆಂದರು.

ನಾವದಗಿ ಬೃಹನ್ ಮಠದ ಶ್ರೀ ರಾಜೇಂದ್ರ ಒಡೆಯರ ಮಹಾಸ್ವಾಮಿಗಳು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಮಾತನಾಡಿದರು.

ಇದೇ ಸಮಯದಲ್ಲಿ ವಿವಿಧ ಸಂಘ ಸಂಸ್ಥೆಯ ಮುಖಂಡರುಗಳು ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ನಡೆಯುವ ಈ ದಾಸೋಹ ಸೇವೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವದಾಗಿ ಹೇಳಿದರು.

ಈ ಸಮಯದಲ್ಲಿ ಮುಖಂಡರುಗಳಾದ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಎಂ.ಎಸ್.ಸರಶೆಟ್ಟಿ, ಆನಂದ ಮದರಕಲ್ಲ, ಜಿ.ಎಸ್.ಕಶೆಟ್ಟಿ, ಕಾಶಿನಾಥ ಮುರಾಳ, ಎಂ.ಕೆ.ಚೋರಗಸ್ತಿ, ಇಬ್ರಾಹಿಂ ಮನ್ಸೂರ, ಬಿ.ಎನ್.ಹಿಪ್ಪರಗಿ, ವಿರೇಶಗೌಡ ಅಸ್ಕಿ, ತಮ್ಮಣ್ಣ ದೇಶಪಾಂಡೆ, ಎಂ.ಎಸ್.ಸರಶೆಟ್ಟಿ, ಪ್ರಭುಗೌಡ ಮದರಕಲ್ಲ, ಎಸ್.ಎಂ.ಬಸಣ್ಣವರ, ಓಂಪ್ರಕಾಶ ಡೋಣೂರಮಠ, ಬಂಡು ದಾಯಪುಲೆ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಸಂಗನಗೌಡ ಅಸ್ಕಿ, ಘಜದಂಡಯ್ಯ ಹಿರೇಮಠ, ಮಂಜುನಾಥ ಶೆಟ್ಟಿ, ಶ್ರೀಶೈಲ ಸಜ್ಜನ, ಕಾಶಿನಾಥ ಅರಳಿಚಂಡಿ, ಕಾಶಿನಾಥ ಹಿರೇಮಠ, ಯಲ್ಲಪ್ಪ ಮಾದರ, ಮೊದಲಾದವರು ಇದ್ದರು.

ಮಹಾಂತೇಶ ಮುರಾಳ ನಿರುಪಿಸಿ ವಂದಿಸಿದರು.