ದಾಸಿಮಯ್ಯರ ಮೌಲ್ಯಧಾರಿತ ಸಮಾಜ ರಚನೆ ಅಗತ್ಯ- ಅಣ್ಣಮ್ಮ

ರಾಯಚೂರು, ಮಾ.೨೬- ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಅವರ ನಡುವೆ ಅನೇಕ ಗೊಂದಲ ಸೃಷ್ಟಿಯಿದೆ ಆದರೆ
ಸಮಾಜದಲ್ಲಿ ಮೌಢ್ಯ, ಕಂದಾಚಾರದ ವಿರುದ್ಧ ಕಾಂತ್ರಿಕಾರ ಹೆಜ್ಜೆಗಳನ್ನಿಟ್ಟ ಶರಣರು ವೈಚಾರಿಕ ಚಿಂತನೆಗಳ ಮೂಲಕ ಜನರಿಗೆ ಅರಿವಿನ ದಾರಿ ತೋರಿದ ಕಾಯಕ ಶ್ರೇಷ್ಠರೇ ದಾಸಿಮಯ್ಯವೆಂದು
ಉಪನ್ಯಾಸಕಿ ಅಣ್ಣಮ್ಮ ಮೇಟಿಗೌಡ ಅವರು ಹೇಳಿದರು.
ಅವರಿಂದು ನಗರದ ಕನ್ನಡ ಭವನದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ೧೧ನೇ ಶತಮಾನದಲ್ಲಿ ದಾಸಿಮಯ್ಯರ ವಚನ ಸಾಹಿತ್ಯದ ಉಲ್ಲೇಖ ಇಲ್ಲವೆಂದು ಅನೇಕರ ಅಭಿಪ್ರಾಯ, ಆದರೆ
ಶರಣರಲ್ಲಿ ಪ್ರಥಮವಾಗಿ ವಚನಗಳನ್ನು ರಚಿಸಿದವರು ದೇವರ ದಾಸಿಮಯ್ಯ.ಅನಂತರ ಬಂದ ಶರಣರ ವಚನಗಳಲ್ಲೂ ಅವರ ವಚನಗಳ ಗಾಢ ಪ್ರಭಾವವನ್ನು ಕಾಣಬಹುದು ಎಂದು ಹೇಳಿದರು. ಶಂಕರ ದಾಸಿಮಯ್ಯ, ಜೇಡರ ದಾಸಿಮಯ್ಯ, ದೇವರ ದಾಸಿಮಯ್ಯ ಎಂದು ಭೇದ ಮಾಡದೆ ಇವರೆಲ್ಲರೂ ಒಂದೇ ಎಂದು ಏಕತೆಯಿಂದ ಬಾಳಬೇಕು ಎಂದು ಸಲಹೆ ನೀಡಿದರು. ದಾಸಿಮಯ್ಯ ಅವರು ಅಷ್ಟವರಣ, ಪಂಚಾಕ್ಷರ, ಶತಸ್ಥಳ ಸಿದ್ಧಾಂತ ಮೂಲಕ ಸಮಾಜದಲ್ಲಿ ಮೌಢ್ಯತೆ ಹೋಗಲಾಡಿಸಿದ ಶ್ರೇಷ್ಠ ದಾಸರು ಎಂದರು. ಕಾಯಕದಲ್ಲಿ ಅಡಗಿದ ಪರಿಕರಿಗಳ ಶಬ್ದಗಳಿಂದ ವಚನ ಸಾಹಿತ್ಯವನ್ನು ಮುಂದುವರಿಸದರು.ಜೇಡರ ದಾಸಿಮಯ್ಯ ಮತ್ತು ದೇವರ ದಾಸಿಮಯ್ಯ ಕುರಿತು ಅರಿಯದ ಹಿರಿಯ ಸಂಶೋಧಕರು ಇಲ್ಲ ಸಲ್ಲದನ್ನು ಹೇಳುತ್ತಾರೆ. ಆದ್ಯ ವಚನಕಾರರಾದ ಅವರ ವಚನಗಳ ತಿರುಳನ್ನು ಇಲ್ಲಿಯವರೆಗೆ ಅರ್ಥ ಮಾಡಿಕೊಳ್ಳದ ಸಂಶೋಧಕರು ನಮ್ಮ ಜನಾಂಗದಲ್ಲಿ ಭೇದ ಹುಟ್ಟಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಅಂಥವರ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬಾರದು
ಎಂದು ಹೇಳಿದರು. ಹಿಂದಿನ ಪೂರ್ವದಲ್ಲಿ ದಾಸಿಮಯ್ಯ ಅವರನ್ನು ಆದ್ಯ ವಚನಕಾರರು ಎಂದು ಕರೆಯುತ್ತಿದ್ದರು. ಶರಣರ ಸುಳ್ ನುಡಿಗಳು ಎಂಬುದು ತಮಿಳು ನಲ್ಲಿ ಭಾಷೆ ಎಂದರ್ಥ ಆದರೆ ಪ್ರಸ್ತುತ ಸಮಾಜದ ಹಣದ ಸುಳಿಗಾಗಿ ಅನೇಕ ಅತ್ಯಾಚಾರ, ಭ್ರಷ್ಟಾಚಾರ, ದಬ್ಬಾಳಿಕೆ ಮುಂತಾದವು ಕಾಣಬಹುದು ಇದನ್ನು ಕಡೆಗಣಿಸಲು ಆದ್ಯ ವಚನಗಳು ದಾಸಿಮಯ್ಯ ಆರಂಭಿಸಿದರು. ೧೧ನೇ ಶತಮಾನದ ಶರಣರು ದೇವಸ್ಥಾನದಲ್ಲಿ ಕಾಯಕವನ್ನು ಮುಂದುವರಿಸಲು ಸತ್ಯ ಶುದ್ಧ ಕಾಯಕ, ನಿತ್ಯ ಲಿಂಗಾಚರಣೆ, ಮತ್ತೆ ದಾಸೋಹ ಕಾಯಕವನ್ನು ಆರಂಭಿಸದರು ಅದಕ್ಕೆ ಭದ್ರ ಬುನಾದಿ ಹಾಕಿದ್ದು ದಾಸಿಮಯ್ಯ ಎಂದರು.
ಆದ್ಯ ವಚನಕಾರ ದೇವರ ದಾಸಿಮಯ್ಯನವರ ವಚನಗಳನ್ನು ಓದುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡು ಸಮಾನತೆಯ ಸಮಾಜಕ್ಕಾಗಿ ಶ್ರಮಿಸಬೇಕು ಎಂದರು.
ಮೌಲ್ಯಾಧಾರಿತ ಸಮಾಜ ರಚನೆಯ ತೀವ್ರ ಅಗತ್ಯ ಇರುವ ಈಗಿನ ಕಾಲಘಟ್ಟದಲ್ಲಿ ದಾರ್ಶನಿಕರ ಸಂದೇಶಗಳ ಪಾಲನೆಯಾಗಬೇಕು ಎಂದರು.
ವಚನ ಸಾಹಿತ್ಯದ ಮತ್ತು ನೇಕಾರ ಜೊತೆಗೆ ಸಮಾಜವನ್ನು ಒಗ್ಗೂಡಿಸದ ದಾಸಿಮಯ್ಯ ಅವರ
ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಎಂದರು.
ಹಿಂದಿನ ಪೀಳಿಗೆ ಅರ್ಥೈಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಮಂಗಳ ನಾಯಕ, ಜಿಲ್ಲಾಧ್ಯಕ್ಷ ನಾಗರಾಜ, ತಾಲೂಕು ಅಧ್ಯಕ್ಷ ಈರಣ್ಣ, ರುಕ್ಮಿಣಿ ಸಮಾಜದ ಮುಖಂಡರು ಸೇರಿದಂತೆ ಉಪಸ್ಥಿತರಿದ್ದರು.