ದಾಸಸಾಹಿತ್ಯ ಶ್ರೇಷ್ಠ ಸಾಹಿತ್ಯ

ಕಲಬುರಗಿ ಡಿ 9: ಕನ್ನಡದ ಸಾಹಿತ್ಯಕ್ಕೆತನ್ನದೇ ಆದ ಕೊಡುಗೆ ನೀಡಿದ ದಾಸ ಸಾಹಿತ್ಯ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಉತ್ತರಾದಿ ಮಠದ ಮಠಾಧಿಕಾರಿ ರಾಮಾಚಾರ್ಯ ಘಂಟಿ ಅವರು ಹೇಳಿದರು.
ನಗರದ ಬ್ರಹ್ಮಪುರ ಉತ್ತರಾದಿ ಮಠ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ದಾಸ ಸಾಹಿತ್ಯ ಅಕಾಡೆಮಿ ಬುಧವಾರ ಆಯೋಜಿಸಿದ ಶ್ರೀ ಜಗನ್ನಾಥ ದಾಸ ಚಲನ ಚಿತ್ರ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದಾಸರ ಬಗ್ಗೆ ಚಲನ ಚಿತ್ರ ನಿರ್ಮಾಣವಾಗಿದ್ದು ಸಂತಸದ ಸಂಗತಿ. ದಾಸರಜೀವನ ಮೌಲ್ಯ ಬಿಂಬಿಸುವ ಚಿತ್ರ ಇದಾಗಿದ್ದು, ಎಲ್ಲದಾಸಸಾಹಿತ್ಯದ ಅಭಿಮಾನಿಗಳು ಈ ಚಲನ ಚಿತ್ರವನ್ನು ಚಿತ್ರ ಮಂದಿರದಲ್ಲಿಹೋಗಿ ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ವಿಶ್ವ ಮಧ್ವ ಮಹಾಪರಿಷತ್ ಜಿಲ್ಲಾಧ್ಯಕ್ಷ ರಾಮಾಚಾರ್ಯ ಮೋಘರೆ, ಪಂ.ವಿನೋದಾಚಾರ್ಯ ಗಲಗಲಿ, ಪಂ. ಗೋಪಾಲಾಚಾರ್ಯ ಅಕಮಂಚಿ, ದಾಸ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರವಿ ಲಾತೂರಕರ, ಕಾರ್ಯದರ್ಶಿ ಶಾಮಸುಂದರ ಕುಲಕರ್ಣಿ, ಮಾತನಾಡಿದರು.
ಬಾಲಕೃಷ್ಣ ಲಾತೂರಕರ್, ಗಾಯಕ ಅನಂತ ಮಿಸ್ತ್ರಿ, ಗುಂಡಾಚಾರ್ಯ ಜೋಶಿ ನರಬೋಳಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಶ್ರೀ ಜಗನ್ನಾಥ ದಾಸರು ಚಲನಚಿತ್ರದ ಪ್ರಚಾರ ಸಾಹಿತ್ಯ ಬಿಡುಗಡೆಗೊಳಿಸಲಾಯಿತು.