ದಾಸಶ್ರೇಷ್ಠ ಭಕ್ತ ಕನಕದಾಸರ ಸಾಮಾಜೀಕ ಸೇವೆ ಅವಿಸ್ಮರಣಿಯ : ಪಾಟೀಲ

ಕಾಳಗಿ.ನ.12 : ಜಾತಿ-ಭೇದ, ಮತ ಪಂಥಗಳನ್ನು ಮರೆತು ಸಮ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ದಾಸಶ್ರೇಷ್ಠ ಭಕ್ತ ಕನಕದಾಸರು ಮಾಡಿರುವ ಸಾಮಾಜೀಕ ಸೇವೆ ಅವಿಸ್ಮರಣೀಯವಾಗಿದೆ ಎಂದು ಚಿಂಚೋಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೇಖರ ಪಾಟೀಲ ಕಾಳಗಿ ಅವರು ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿರುವ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಭಕ್ತ ಕನಕದಾಸರ ಆಚಾರ ವಿಚಾರಗಳನ್ನು ಪ್ರಚಾರಕ್ಕೆ ತರುವ ನಿಟ್ಟಿನಲ್ಲಿ ಆಗಿನ ಬಿಎಸ್‍ವೈ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಯಂತಿ ಆಚರಣೆ ಜಾರಿಗೆ ತಂದು ಭಕ್ತ ಕನಕದಾಸರ ವಿಚಾರಗಳಿಗೆ ಶಕ್ತಿತುಂಬಲಾಯಿತು ಎಂದರು.

ಕಾಳಗಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಶಾಂತ ಕದಂ ಕಾಳಗಿ ಅವರು, ಕನಕದಾಸರ ಭಾವಚಿತ್ರಕ್ಕೆ ಪೂಜೆ ಮಾಡಿ, ಪುಷ್ಪ ನಮನ ಸಲ್ಲಿಸಿ ಭಕ್ತಿ ಪೂರ್ವಕವಾಗಿ ಆಚರಣೆ ಮಾಡಿದರು.

ತಾ.ಪಂ. ಮಾಜಿ ಸದಸ್ಯ ಚಂದ್ರಕಾಂತ ಜಾಧವ, ಕಾಳಶೆಟ್ಟಿ ಪಡಶೆಟ್ಟಿ, ಸಂತೋಷ ಜಾಧವ, ರಮೇಶ ಕಿಟ್ಟದ, ವಿಷ್ಣುಕಾಂತ ಪರುತೆ, ಕೃಷ್ಣ ರಾಠೋಡ, ಜಗದೀಶ ಪಾಟೀಲ, ದೇವಿಂದ್ರ ಕದಂ, ಗಣೇಶ ಸಿಂಗಶೆಟ್ಟಿ, ಶ್ರೀನಿವಾಶ ಗುರುಮಿಟ್ಕಲ್, ಕೃಷ್ಣ ಸಿಂಗಶೆಟ್ಟಿ, ಭೀಮರಾವ ರಾಠೋಡ, ಮಂಜುನಾಥ ಹೆಬ್ಬಾಳ, ತಿಮ್ಮಯ್ಯ ಒಡೆಯರ್, ವೀರಭದ್ರ ಸಲಗೂರ, ಸುನೀಲ ರಾಜಾಪುರ, ಕಾಶಿನಾಥ ರಾಜಾಪುರ, ರಾಮಸ್ವಾಮಿ ಭೋವಿ ಸೇರಿದಂತೆ ಅನೇಕರಿದ್ದರು.